ಕುಂದಾಪುರದಲ್ಲಿ ಸಮಾಜಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನವಾಗಿದ್ದ ನಾಸೀರ್ ಹುಸೇನ್ ಚಿಕ್ಕಮಗಳೂರಿಗೆ ವರ್ಗಾವಣೆ

582

ಚಿಕ್ಕಮಗಳೂರು : ಚಿಕ್ಕಮಗಳೂರು ನಗರ ಕಾನೂನು ಸುವ್ಯವಸ್ಥೆಯ ಪಿಎಸ್‍ಐ 2 ಆಗಿ ನಾಸೀರ್ ಹುಸೇನ್‍ರನ್ನು ವರ್ಗಾವಣೆಗೊಳಿಸಿ ನೇಮಕಗೊಳಿಸಲಾಗಿದ್ದು ಮುಂದಿನ ಎರಡು ದಿನಗಳಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮೂಲತಃ ಭಾರತೀಯ ಭೂಸೇನಾಪಡೆಯಲ್ಲಿ ಸೈನಿಕರಾಗಿನಿವೃತ್ತರಾಗಿದ್ದ ಅವರು, 6 ತಿಂಗಳು ಪಿಡಿಓ ಆಗಿದ್ದರು. 2010ರಲ್ಲಿ ಪ್ರೊಬೆಷನರಿ ಪಿಎಸ್‍ಐ ಆಗಿದ್ದು, 2012ರಲ್ಲಿ ಕುಂದಾಪುರದ ಅಮಾಸೆಬೈಲ್ ಪಿಎಸ್‍ಐ ಆಗಿ ನೇಮಕವಾದರು. ಅನಂತರ ಮೂರೂವರೆ ವರ್ಷಗಳ ಕಾಲ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪಿಎಸೈ ಆಗಿ ಕರ್ತವ್ಯ ನಿರ್ವಹಿಸಿದರು. ಈ ಅವಧಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪಿಎಸೈಯೋರ್ವ ಕರ್ತವ್ಯ ನಿರ್ವಹಿಸಿದ ಅತ್ಯಧಿಕ ಅವಧಿಯಾಗಿದೆ ಎಂಬುದು ಗಮನಾರ್ಹ.

ನಾಸೀರ್ ಹುಸೈನ್ ಕುಂದಾಪುರದಲ್ಲಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಹಾಗೂ ಸಮಾಜಘಾತುಕ ಶಕ್ತಿಗಳ ಪಾಲಿನ ಸಿಂಹಸ್ವಪ್ನವಾಗಿ ಕಾಡಿದ್ದರು. ಕುಂದಾಪುರದ ಕೋಡಿ ಹಾಗೂ ಕಂಡ್ಲೂರಿನಲ್ಲಿ ಗಲಾಟೆಗಳ ನಿಂಯತ್ರಿಸುವಲ್ಲಿ ನಾಸೀರ್ ಪ್ರಮುಖ ಪಾತ್ರ ವಹಿಸಿದ್ದರು. ಹೆಮ್ಮಾಡಿ ಭಾಗದಲ್ಲಿ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳ ಕಳ್ಳತನ, ಕೋಟೇಶ್ವರ ಕಳ್ಳತನ, ಆನೆಗುಡ್ಡ ದೇವಳದಲ್ಲಿ ಭಕ್ತರ ಚಿನ್ನಾಭರಣ ಕಳ್ಳತನ, ಗಂಗೊಳ್ಳಿ ನಿವಾಸಿ ಲಲಿತಾ ದೇವಾಡಿಗ ಎನ್ನುವವರ ಕೊಲೆ ಪ್ರಕರಣ ಸೇರಿದಂತೆ ಹತ್ತು ಹಲವು ಕಠಿಣ ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಖ್ಯಾತಿ ಗಳಿಸಿಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here