ಅಲ್ಪಸಂಖ್ಯಾತರ ಮೇಲಿನ ಕೇಸ್ ವಾಪಸ್, ಸರ್ಕಾರದ ನಡೆ ವಿರುದ್ಧ ಜಗದೀಶ್ ಶೆಟ್ಟರ್ ಗರಂ…

390

ಹುಬ್ಬಳ್ಳಿ : ಅಲ್ಪಸಂಖ್ಯಾಂತರ ಮೇಲಿನ ಕೇಸ್ ಹಿಂದೆ ತಗೆದುಕೊಳ್ಳುವ ವಿಚಾರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಬಂದಾಗಿನಿಂದಲೂ ಜಾತಿಗಳಲ್ಲಿ ವಿಂಗಡನೆ ಮಾಡಿಕೊಂಡು ಜಾತಿ ಜಾತಿಗಳಲ್ಲಿ ಸಂಘರ್ಷಣೆ ಮಾಡುತ್ತಿದ್ದಾರೆ. ಇದೇಲ್ಲ ಓಟಿನ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡ್ತಾ ಇದ್ದಾರೆ, ಹಾಗಾಗಿ ಸಾಮಾನ್ಯವಾಗಿ ಯಾವುದೇ ಒಂದು ಯೋಜನೆಯನ್ನು ಜಾರಿಗೆ ತರಬೇಕಾದರೆ ಎಲ್ಲಾ ವರ್ಗದವರಿಗೂ ಸಮಾನವಾಗಿ ತರಬೇಕು. ಆದರೆ ರಾಜ್ಯ ಸರ್ಕಾರದ ಈ ಒಂದು ನಿಲುವನ್ನು ನಾನು ಖಂಡಿಸುತ್ತೇನೆ. ಅಲ್ಪಸಂಖ್ಯಾತರ ಮೇಲಿನ ಕೇಸ್ ಹಿಂದೆ ತಗೆದುಕೊಳ್ಳುವ ಕುರಿತಂತೆ ಪೊಲೀಸ್ ಇಲಾಖೆಗೆ ಕೇಳಿದ್ದನ್ನು ನೋಡಿದ್ರೆ ನಮಗೆ ಗಾಬರಿಯಾಗುತ್ತದೆ.
ಹೋರಾಟ ಮಾಡುವವರ ಮೇಲೆ ಸಾಕಷ್ದು ಕ್ರಿಮಿನಲ್ ಕೇಸ್ ಗಳಿವೆ ಆದರೆ ಇನ್ನೂ ಎ,ಷ್ಟೋ ಕೇಸ್ ಗಳನ್ನು ಹಿಂದೆ ತಗೆದುಕೊಂಡಿಲ್ಲ. ರೈತರು ಹೋರಾಟಗಾರರ ಮೇಲೆ ಇನ್ನೂ ಸಾಕಷ್ಟು ಕೇಸ್ ಗಳಿವೆ ಅವರೆಲ್ಲಾ ಇನ್ನೂ ಕೊರ್ಟ್ ಗೆ ಸುತ್ತಾಡುತ್ತಿದ್ದಾರೆ.
ಈವರೆಗೆ ಒಂದು ವರ್ಗದವರನ್ನು ಸಿಮೀತಗೊಳಿಸಿ ಕೇಸ್ ನ್ನು ಹಿಂದೆ ತಗೆದುಕೊಳ್ಳುವುದು ಸರಿಯಲ್ಲ. ರಾಜ್ಯ ಸರ್ಕಾರದ ಈ ಒಂದು ನಿಲುವನ್ನು ನಾನು ಖಂಡಿಸುತ್ತೇನೆ ಖಂಡಸತಾ ಇದ್ದೇನೆ. ಕೇಸ್ ಗಳನ್ನು ಹಿಂದೆ ತಗೆದುಕೊಳ್ಳುವುದಾದರೆ ಎಲ್ಲಾ ವರ್ಗದವರ ಮೇಲಿನ ಕೇಸ್ ಹಿಂದೆ ತಗೆದುಕೊಳ್ಳಲಿ ಇಲ್ಲವಾದ್ರೆ ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡುತ್ತೇವೆ.