ಚಿಕ್ಕಮಗಳೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ನಗರದ ಬಿಜಿಎಸ್ ಕಾಲೇಜಿಗೆ ಶೇ 99 ಫಲಿತಾಂಶ, ಟಾಪರ್ಸ್‍ಗಳ ಸ್ಥಾನ ಹೀಗಿದೆ…

33
firstsuddi

ಚಿಕ್ಕಮಗಳೂರು:- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಬಿಜಿಎಸ್ ಕಾಲೇಜಿಗೆ ಶೇ 99 ಫಲಿತಾಂಶ ಲಭಿಸಿದೆ.

176 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅವರಲ್ಲಿ 95 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ 69 ವಿದ್ಯಾರ್ಥಿಗಳು ಪ್ರಥಮ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಬಿಎಸ್ ರಿಷಿಕ ಮತ್ತು ಎಸ್ ಹಿತಶ್ರೀ ಶೇ 98.16 ಅಂಕ ಗಳಿಸಿ ರಾಜ್ಯದಲ್ಲಿ ಏಳನೇ ಸ್ಥಾನ ಪಡೆದಿದ್ದರೆ, ವಿಜ್ಞಾನ ವಿಭಾಗದಲ್ಲಿ ಡಿ ಸುಪ್ರಿಯ ಶೇ 98.16 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಹತ್ತನೇ ಸ್ಥಾನ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಜೆ ಜಿ ಸುರೇಂದ್ರ ತಿಳಿಸಿದ್ದಾರೆ.