ತುಂಗಾ ನದಿ ಪ್ರವಾಹಕ್ಕೆ ಎರಡು ದಿನಗಳ ಕಾಲ ಶೌಚಾಲಯದಲ್ಲಿ ಸಿಲುಕಿದ ವ್ಯಕ್ತಿ ರಕ್ಷಣೆ…

562
FIRSTSUDDI
ಚಿಕ್ಕಮಗಳೂರು : ಮಲೆನಾಡಿನ ಮಹಾಮಳೆಗೆ ತುಂಗಾ ನದಿಯು ಪ್ರವಾಹ ಬಂದಂತಹಾ ಸಂದರ್ಭದಲ್ಲಿ ಶೌಚಾಲಯದಲ್ಲಿ ಸಿಲುಕಿದ್ದ ಬಿಹಾರ್ ಮೂಲದ ವ್ಯಕ್ತಿಯನ್ನ ರಕ್ಷಿಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಿಹಾರ್ ಮೂಲದ ವಿನೋದ್ ಮಂಡ್ಲೆ ಎಂಬಾತ ಶೌಚಾಲಯಕ್ಕೆಂದು ಶೃಂಗೇರಿ ಶಾರದಾಂಭೆ ದೇವಾಲಯದ ಗಾಂಧಿ ಮೈದಾನದಲ್ಲಿರೋ ಶೌಚಾಲಯಕ್ಕೆ ತೆರಳಿದ್ದಾಗ ಪ್ರವಾಹ ಬಂದು ಆತ ಹೊರಬರಲಾಗದೆ ಅಲ್ಲೆ ಇದ್ದ. ಮಂಗಳವಾರ ಹಾಗೂ ಬುಧವಾರ ಎರಡು ದಿನ ಆತ ಅಲ್ಲೇ ದಿನದೂಡಿದ್ದಾನೆ. ವಿಷಯ ತಿಳಿದ ಪೊಲೀಸರು ಎನ್.ಎನ್.ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳೊಂದಿಗೆ ಶೌಚಾಲಯದಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ರಕ್ಷಿಸಿದ್ದಾರೆ.