ಕಲಬುರುಗಿ : ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿಂದು ರಾಕಿಂಗ್ ಸ್ಟಾರ್ ಯಶ್ ಹವಾ ಜೋರಾಗಿಯೇ ಇತ್ತು. 69 ನೇ ಗಣರಾಜ್ಯೋತ್ಸವದ ಸವಿನೆನಪಿಗಾಗಿ ಶಾಸಕ ಡಾ ಅಜಯಸಿಂಗ್ ನೇತೃತ್ವದಲ್ಲಿ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ 102 ಅಡಿ ಎತ್ತರದ ರಾಜ್ಯದ ಎರಡನೇ ಅತೀ ಎತ್ತರದ ಧ್ವಜ ಸ್ಥಂಭ ಮತ್ತು 30/20 ಅಳತೆಯ ಧ್ವಜದ ಅನಾವರಣ ಕಾರ್ಯಕ್ರಮವನ್ನ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಈ ಒಂದು ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ಸರಿಗಮಪ ಖ್ಯಾತಿಯ ಸುನೀಲ್ಕುಮಾರ ಗುಂಜಗುಡ ಬಂದಿದ್ದರಿಂದ ನಿರೀಕ್ಷೆಯಂತೆ ಜಜಸಾಗರವೇ ಹರಿದು ಬಂದಿತ್ತು. ಕ್ರೀಡಾಂಗಣದಲ್ಲಿ ಸಮಾರಂಭ ಆಯೋಜಿಸಿದ್ದರಿಂದ ಎತ್ತ ನೋಡಿದರತ್ತ ಜನವೋ ಜನ… ಕ್ರೀಡಾಂಗಣಕ್ಕೆ ಯಶ್ ಎಂಟ್ರಿ ಕೊಡುತ್ತಿದ್ದಂತೆ ಅಭಿಮಾನಿಗಳು ಹುಯ್ಯೋ ಹುಯ್ಯೋ ಅಂತಾ ಹೆಚ್ಚೆದ್ದು ಕುಣಿದು ಕುಪ್ಪಳಿಸಿದರು.. ಸಮಾರಂಭದಲ್ಲಿ ಅಣ್ತಮ್ಮ ಸೇರಿದಂತೆ ವಿವಿಧ ಚಿತ್ರಗಳ ಡೈಲಾಗ್ ಹೊಡೆದು ನೆರೆದಿದ್ದ ಜನರನ್ನ ಪುಳಕಿತರನ್ನಾಗುವಂತೆ ಮಾಡಿತ್ತು.. ಇನ್ನೂ ಇದಕ್ಕೂ ಮುನ್ನ ಸರಿಗಮಪ ಖ್ಯಾತಿಯ ಸುನಿಲ್ಕುಮಾರ ಗುಂಜಗುಡ ಕೂಡ ತನ್ನ ಅದ್ಭುತ ಗಾಯನದ ಮೂಲಕ ತವರು ನೆಲದಲ್ಲಿ ಹಾಡುಗಳನ್ನ ಹಾಡಿ ಅಭಿಮಾನಿಗಳೂ ಮತ್ತು ಜನರ ಮನಗೆದ್ದರು.. ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿಪೊಲೀಸ್ ಭದ್ರತೆಯನ್ನ ಕಲ್ಪಿಸಲಾಗಿತ್ತು..