ನಮ್ಮ ಸೋಲಿಗೆ ಬಿಜೆಪಿಯವರ ಅಪಪ್ರಚಾರವೇ ಪ್ರಮುಖ ಕಾರಣ – ಸಿದ್ದರಾಮಯ್ಯ

282
firstsuddi

ಬೆಂಗಳೂರು- ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ವಿಶ್ವಾಸ ವನ್ನು ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ., ಐದು ವರ್ಷ ನಮ್ಮ ಸರ್ಕಾರ ಒಳ್ಳೆಯ ಆಡಳಿತ ನೀಡಿತ್ತು. ಸರ್ಕಾರ ಕಾರ್ಯಕ್ರಮ ನೋಡಿ ವೋಟ್ ಹಾಕಿದ್ದರೆ 150 ಸೀಟು ಬರುತ್ತಿತ್ತು, ಆದರೆ ಬಿಜೆಪಿಯ ಅಪಪ್ರಚಾರದಿಂದ ಅದು ಸಾಧ್ಯವಾಗಲಿಲ್ಲ. ಬಿಜೆಪಿಯವರು ಕಾರ್ಯಕರ್ತನನ್ನು ನೇಮಿಸಿ ಕಾಂಗ್ರೆಸ್ ವಿರುದ್ಧ ಹಿಂದುತ್ವದ ಕುರಿತು ಸುಳ್ಳು ಪ್ರಚಾರಗಳನ್ನು ಮಾಡಿದರು. ಈ ಅಪಪ್ರಚಾರಕ್ಕೆ ಪ್ರತಿಯಾಗಿ ಸತ್ಯ ಹೇಳಿ ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್ ವಿಫಲವಾಯಿತು.ಐಟಿ ದಾಳಿ ಮಾಡಿಸಿ ಭಯ ಹುಟ್ಟಿಸುವ ಕೆಲಸವನ್ನು ಮಾಡಿದ್ರು, ಇದಕ್ಕೆ ನಾನು ಯಾರನ್ನು ಹೊಣೆ ಮಾಡುವುದಿಲ್ಲ. ನಮ್ಮ ಸೋಲಿಗೆ ಬಿಜೆಪಿಯವರ ಅಪಪ್ರಚಾರವೇ ಪ್ರಮುಖ ಕಾರಣ ಎಂದು ಹೇಳಿದ್ದು ಅಧ್ಛ್ಯಕ್ಷರಾದ ದಿನೇಶ್ ಗುಂಡೂರಾವ್ , ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರಿಗೆ ಎಲ್ಲಾ ರೀತಿಯ ಸಹಕಾರ, ಬೆಂಬಲ ನೀಡಬೇಕು ಎಂದು ತಿಳಿಸಿದ್ದಾರೆ.