ಪ್ರಜ್ವಲ್ ರೇವಣ್ಣ  ಅವರನ್ನು ಕೂಡಲೇ ಬಂಧಿಸುವಂತೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ.

27

ಮಂಗಳೂರು:  ಹಾಸನದ ಲೈಂಗಿಕ  ಹಗರಣ ಪ್ರಕರಣದಲ್ಲಿ  ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ  ಅವರನ್ನುಕೂಡಲೇ ಬಂಧಿಸಬೇಕು ಎಂದು ದಕ್ಷಿಣ ಕನ್ನಡ ಮಹಿಳಾ ಕಾಂಗ್ರೆಸ್ ವತಿಯಿಂದ  ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ  ನಡೆಸಿದರು.  ನಗರದ ಮಲ್ಲಿಕಟ್ಟೆ ಕಾಂಗ್ರೆಸ್  ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪ್ರಜ್ವಲ್  ರೇವಣ್ಣ ನನ್ನು ಯಾವ ದೇಶದಲ್ಲಿ ಇದ್ದರು ಕೂಡಲೇ ಬಂಧಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಘೋಷಣೆ ಕೊಡುವ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ಮಾತನಾಡಿದ   ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು ಹಿನ್ನೆಲೆ ಗೊತ್ತಿದ್ದು ಪ್ರಜ್ವಲ್ ಗೆ ಟಿಕೆಟ್ ಕೊಟ್ಟು ಆತನಿಗೆ ಕೇಂದ್ರ ಸರ್ಕಾರ ರಕ್ಷಣೆ ನೀಡಿದೆ.  ಬೇಟಿ ಬಚಾವೋ  ಅನ್ನುತ್ತಿದ್ದ ನರೇಂದ್ರ ಮೋದಿಯವರು ಈಗ ಎಲ್ಲಿದ್ದಾರೆ ಬಿಜೆಪಿಯವರು ಯಾಕೆ ಪೆನ್ಡ್ರೈವ್ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.  ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಗ್ಯಾರಂಟಿ ಹಣದಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದರು ಆದರೆ ಇಲ್ಲಿ ದಾರಿ ತಪ್ಪಿದ್ದು ಜೆಡಿಎಸ್ ನಾಯಕರು ನೂರಾರು ಹೆಣ್ಣುಮಕ್ಕಳ ಕುಟುಂಬ ಈಗ ಹಾಳಾಗುವಂತೆ  ಮಾಡಿದ ಪ್ರಜ್ವಲ್ ನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಶಾಹುಲ್ ಹಮೀದ್, ತನ್ವೀರ್ ಶಾ, ರೂಪಾ ಚೇತನ್, ಚಂದ್ರಕಲಾ ಜೋಗಿ, ಶಶಿಕಲಾ ಪದ್ಮನಾಭನ್, ಶಾಂತಲಾ ಗಟ್ಟಿ, ಗೀತಾ ಅತ್ತಾವರ, ಚಂದ್ರಕಲಾ ಡಿ.ರಾವ್, ನಮಿತಾ ಡಿ.ರಾವ್, ವಂದನ ಭಂಡಾರಿ, ಶಾರಿಕ ಪೂಜಾರಿ, ಪ್ರಮಿಳಾ, ಅನಿತ, ವಿಲ್ಮ, ಡಿಂಪಲ್, ಮೇರಿ, ನ್ಯಾನ್ಸಿ, ಲವಿನಾ, ಅರ್ಚನ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.