ರಕ್ತದಲ್ಲಿ ಸುದೀಪ್ ಚಿತ್ರ ಬಿಡಿಸಿ ಅಭಿಮಾನ ತೋರಿದ ಫ್ಯಾನ್- ಪ್ರತಿಕ್ರಿಯಿಸಿದ ಕಿಚ್ಚ.

129
firstsuddi

ಕಿಚ್ಚ ಸುದೀಪ್ ಅವರನ್ನು ಹಿಂಬಾಲಿಸುವ ಅಭಿಮಾನಿಗಳು ಕೋಟ್ಯಂತರ ಮಂದಿ ಇದ್ದಾರೆ. ಅದೇ ರೀತಿ ಅನೇಕರು ಅವರ ಮೇಲೆ ಇರುವ ಅಭಿಮಾನವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಇದಕ್ಕೆ ಹೊಸ ಸಾಕ್ಷಿಯೊಂದು ಸಿಕ್ಕಿದೆ.

ಶಿವಮೊಗ್ಗದ ಅಭಿಮಾನಿ ವೈಷ್ಣವಿ ಎನ್ನುವವರು ತಮ್ಮದೇ ರಕ್ತದಿಂದ ಸುದೀಪ್ ಅವರ ಚಿತ್ರ ಬಿಡಿಸಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಸುದೀಪ್ ಅವರು ಕೂಡ ಇದನ್ನು ರೀಟ್ವೀಟ್ ಮಾಡಿಕೊಂಡಿದ್ದು, ಕೈ ಮುಗಿಯುವ ಎಮೋಜಿ ಹಾಕಿದ್ದಾರೆ.

ಮಹಿಳಾ ಅಭಿಮಾನಿಯ ರಕ್ತದಲ್ಲಿ ತಯಾರಾದ ಚಿತ್ರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದರೆ ಇನ್ನೂ ಹಲವರು ರಕ್ತ ಅಮೂಲ್ಯವಾದದ್ದು ಅದನ್ನು ಈ ರೀತಿ ಹಾಳು ಮಾಡಬೇಡಿ. ಅಭಿಮಾನವನ್ನು ರಕ್ತದಾನ ಮಾಡುವ ಮೂಲಕ ತೋರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ಸ್ ಏನೇ ಬರುತ್ತಿದ್ದರೂ ಅಭಿಮಾನಿಯ ಬಗ್ಗೆ ಸಾಕಷ್ಟು ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್- ನಿರ್ಮಾಪಕ ಕುಮಾರ್ ಕಾಲ್‌ಶೀಟ್ ಕದನಕ್ಕೆ ಪೂರ್ಣ ವಿರಾಮ ಬೀಳುವ ಮುಂಚೆಯೇ ಕಿಚ್ಚನ 46ನೇ ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಕುಮಾರ್ ಜೊತೆಗಿನ ಸಂಧಾನದ ಮಾತುಕತೆ ನಡೆಯುತ್ತಿದೆ. ಈ ವಾರದ ಅಂತ್ಯದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ಈ ಬೆನ್ನಲ್ಲೇ ವಿವಾದ ಬದಿಗಿಟ್ಟು ಕಾಯಕವೇ ಕೈಲಾಸ ಅಂತಾ ಸುದೀಪ್ ಹೊಸ ಸಿನಿಮಾದ ಶೂಟಿಂಗ್‌ನತ್ತ ತೊಡಗಿಕೊಂಡಿದ್ದಾರೆ.

ಸುದೀಪ್ ಅವರು ಸದ್ಯ ‘ಕೆ46’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಶೂಟಿಂಗ್ ಆಗಸ್ಟ್ ತಿಂಗಳಲ್ಲಿ ಆರಂಭ ಆಗಲಿದೆ. ಸತತ 50 ದಿನಕ್ಕೂ ಹೆಚ್ಚು ದಿನಗಳ ಕಾಲ ಈ ಶೂಟ್ ನಡೆಯಲಿದೆ ಎನ್ನಲಾಗಿದೆ. ಇದಲ್ಲದೆ, ಇನ್ನೂ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.