ರಸ್ತೆ ಕುಸಿತದ ಸ್ಥಳಕ್ಕೆ ಕೆಜಿಎಪ್ ರಾಜ್ಯಾಧ್ಯಕ್ಷ ಬಿದರಹಳ್ಳಿ ಜಯರಾಂ ಬೇಟಿ…

1932
FIRSTSUDDI

ಕೊಟ್ಟಿಗೆಹಾರ:ಜಾವಳಿ ಸಮೀಪದ ಕೆಂಪುಮೋರಿ ಸಮೀಪ ಕೊಟ್ಟಿಗೆರಹಾರ ಕುದುರೆಮುಖ ಮೂಲಕ ಮಂಗಳೂರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕುಸಿತವಾದ ಸ್ಥಳಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಜಯರಾಂ ಬಿದರಹಳ್ಳಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿರಾಡಿ ಘಾಟ್ ರಸ್ತೆ ಅತಿವೃಷ್ಟಿಯಿಂದ ಹಾನಿಗೊಂಡು ಸಂಚಾರ ಸ್ಥಗಿತಗೊಂಡಿದೆ. ಮಡಿಕೇರಿ ಮಂಗಳೂರು ಸಂಪರ್ಕ ರಸ್ತೆ ಕೂಡ ಕಡಿತಗೊಂಡಿದೆ. ಮಂಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್‍ನಲ್ಲಿ ಬಾರಿ ವಾಹನ ಸಂಚಾರ ನಿಷೇಧಿಸಿದ್ದು ಮಂಗಳೂರು ಸಂಚರಿಸುವ ಬಾರಿ ವಾಹನಗಳಿಗೆ ಕೊಟ್ಟಿಗೆಹಾರ ಕುದುರೆಮುಖ ಎಸ್ ಕೆ ಬಾರ್ಡರ್ ರಸ್ತೆಯೊಂದೆ ಏಕೈಕ ಮಾರ್ಗವಾಗಿದ್ದು ಈ ಮಾರ್ಗದಲ್ಲಿ ಜಾವಳಿ ಸಮೀಪದ ಕೆಂಪುಮೋರಿ ಸಮೀಪ ರಸ್ತೆ ಅರ್ಧ ಭಾಗ ಕುಸಿದಿದ್ದು ಸಂಪರ್ಕ ಕಡಿತವಾಗುವ ಬೀತಿ ಎದುರಾಗಿದೆ ಎಂದರು.
ರಸ್ತೆ ಕುಸಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಚನಾ ಫಲಕಗಳನ್ನು ಅಳವಡಿಸದೆ ಇರುವದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಕೂಡಲೆ ಸಂಬಂಧಪಟ್ಟವರು ಸೂಚನಾ ಫಲಕ ಅಳವಡಿಸಿ ಮಳೆ ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಬಾಳೂರು ಮಾತನಾಡಿ ಮಲೆನಾಡು ಭಾಗದಲ್ಲಿ ಕಾಫಿ, ಮೆಣಸು, ಅಡಿಕೆ ಭತ್ತ ಮುಂತಾದ ಬೆಳೆಗಳು ನೆಲಕಚ್ಚಿವೆ. ಶೇ 70 ರಷ್ಟು ಭಾಗ ಹಾನಿಯಾಗಿದೆ. ಸರ್ಕಾರ ರೈತರ ನೆರವಿಗೆ ಬರುವ ಅಗತ್ಯವಿದೆ. ಮಲೆನಾಡಿನ ಬಹುತೇಕ ರಸ್ತೆಗಳು ಹಾನಿಯಾಗಿದ್ದು ರಸ್ತೆ ದುರಸ್ಥಿ ಮಾಡುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನರಾದ ಚನ್ನಕೇಶವಗೌಡ, ಗ್ರಾ.ಪಂ ಸದಸ್ಯರಾದ ಪ್ರತೀಶ್, ಮಂಜುನಾಥ್, ಗ್ರಾಮಸ್ಥರಾದ ರಾಜು, ಆದರ್ಶ್, ಜಾವಳಿ ಪರೀಕ್ಷಿತ್, ರಾಜೇಶ್, ಚಂದ್ರಶೇಖರ್, ತಿಲಕ್ಬಾಳೂರು,ಮುಂತಾದವರು ಇದ್ದರು.