ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನದಂದು ಮಗುವನ್ನು ಮನೆಗೆ ಬರಮಾಡಿಕೊಂಡಿದ್ದಾರೆ. ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ನಯನಾ, ಮಗುವಿಗೆ ನಿಮ್ಮ ಆಶೀರ್ವಾದವಿರಲಿ ಎಂದು ಕೋರಿದ್ದಾರೆ.
ಫೋಟೋ ಹಂಚಿಕೊಂಡಿರುವ ನಯನಾ ಅವರು, ‘ನನ್ನ ಜೀವನದ ಮುಖ್ಯವಾದ ವ್ಯಕ್ತಿಗಳು ಒಂದೇ ಫ್ರೇಮ್‌ನಲ್ಲಿದ್ದಾರೆ. ಮನೆಗೆ ಸ್ವಾಗತ ನಮ್ಮ ಮುದ್ದುಲಕ್ಷ್ಮಿ’ ಎಂದು ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ನಯನಾ ಅವರ ಪತಿ ಮಗುವನ್ನು ಮುದ್ದಾಡುತ್ತಿದ್ದಾರೆ. ಕೈಯಲ್ಲಿ ಕಂದಮ್ಮಾಳನ್ನು ಹಿಡಿದು ನಗುತ್ತಿರುವ ಫೋಟೋ ನೆಟ್ಟಿಗರಿಗೆ ಇಷ್ಟವಾಗಿದೆ. ‘ನವೆಂಬರ್‌ನಲ್ಲಿ ಹುಟ್ಟಿದ ಕನ್ನಡಾಂಬೆಗೆ ಶುಭವಾಗಲಿ’ ಹಾಗೂ ‘ಹೆಣ್ಣು ಮಗು ಬೇಕು ಅನ್ನೋದು ಎಲ್ಲರ ಆಸೆ ಅದರಂತೆ ಲಕ್ಷ್ಮಿ ಬಂದಿದ್ದಾಳೆ’ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಶರತ್ ಎಂಬುವವರ ಜೊತೆ ನಯನಾ ಸರಳವಾಗಿ ಮದುವೆಯಾದರು. ಈಗ ಮೊದಲ ಮಗುವಿನ ಬರಮಾಡಿಕೊಂಡಿದ್ದಾರೆ. ಮನೆಗೆ ಹೊಸ ಅತಿಥಿಯ ಆಗಮನದ ಖುಷಿಯಲ್ಲಿದ್ದಾರೆ.
ಹುಬ್ಬಳ್ಳಿಯ ಸಾಮಾನ್ಯ ಹುಡುಗಿ ನಯನಾ ಅವರು ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋ ಎಂಟ್ರಿ ಕೊಟ್ಟು ತಾವು ಎಂತಹ ಪ್ರತಿಭಾನ್ವಿತ ಕಲಾವಿದೆ ಎಂದು ತೋರಿಸಿಕೊಟ್ಟರು. ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ರಂಜಿಸಿದ್ದರು.