ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 2 ಕೆ.ಜಿ. ಚಿನ್ನ ಮತ್ತು 5 ಲಕ್ಷದ 14 ಸಾವಿರ ನಗದು ದರೋಡೆ…

255

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕ್ಯಾತನಹಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ ಸೋಮವಾರ ರಾತ್ರಿ ದರೋಡೆ ನಡೆದಿದ್ದು, ದರೋಡೆಕೋರರು ಬ್ಯಾಂಕಿನ ಕಿಟಕಿ ಸರಳುಗಳನ್ನು ಕತ್ತರಿಸಿ ಒಳನುಗ್ಗಿದ್ದಾರೆ. ಬ್ಯಾಂಕಿನಲ್ಲಿದ್ದ ಸುಮಾರು 3.80 ಕೋಟಿ ರೂ. ಮೌಲ್ಯದ 12 ಕೆ.ಜಿ. ಚಿನ್ನ ಮತ್ತು 5 ಲಕ್ಷದ 14 ಸಾವಿರ ನಗದನ್ನು ದರೋಡೆಕೋರರು ದೋಚಿದ್ದಾರೆ. ಈ ಬಗ್ಗೆ ಹೆಚ್.ಡಿ.ಕೋಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ