ನವದೆಹಲಿ : ಕೋಲ್ಕತ್ತಾದ 33 ವರ್ಷದ ಮಹಿಳೆಯೊಬ್ಬರು ತನ್ನ ಗರ್ಭದ ಶಿಶುವಿಗೆ ಜನ್ಮಜಾತ ಸಮಸ್ಯೆಗಳಿದ್ದು, ಮಗು ಜನಿಸಿದ ನಂತರ ಬದುಕುವ ಸಾಧ್ಯತೆ ಕಡಿಮೆಯಿರುವ ಕಾರಣದಿಂದ ತನಗೆ ಗರ್ಭಪಾತ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ವ್ಯದ್ಯರ ವರದಿಯೊಂದಿಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ದೀಪಕ್ ಮಿಶ್ರಾ ಹಾಗೂ ಎ.ಎಂ. ಕಾನ್’ವಿಲ್ಕರ್ ಇದ್ದ ದ್ವಿಸದಸ್ಯ ನ್ಯಾಯಪೀಠ ಆದೇಶ ನೀಡಿದೆ.
26 ತಿಂಗಳವರೆಗೂ ಜನ್ಮಜಾತ ತೊಂದರೆಗಳಿದ್ದರೆ ಗರ್ಭಿಣಿ ಗರ್ಭಪಾತಕ್ಕೆ ಒಳಗಾಗಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಅನುಮತಿ ನೀಡಿದೆ. 20 ವಾರಗಳ ಮೀರಿ ಗರ್ಭಪಾತ ಕಾನೂನಿನಲ್ಲಿನ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ತನ್ನ ಗರ್ಭದ ಶಿಶುವಿಗೆ ಜನ್ಮಜಾತ ಸಮಸ್ಯೆಗಳಿದ್ದು, ಮಗು ಹುಟ್ಟಿದ ಬಳಿಕ ಬದುಕುವ ಸಾಧ್ಯತೆ ಕಡಿಮೆ ಎಂಬ ಕಾರಣಕ್ಕೆ ಕೋಲ್ಕತ್ತಾ ಮೂಲದ 33 ವರ್ಷದ ಮಹಿಳೆಯೊಬ್ಬರು ಗರ್ಭಪಾತಕ್ಕೆ ಅನುಮತಿ ಕೋರಿ ವೈದ್ಯರ ವರದಿಯೊಂದಿಗೆ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ದೀಪಕ್ ಮಿಶ್ರಾ ಹಾಗೂ ಎ.ಎಂ. ಕಾನ್ವಿಲ್ಕರ್ ಇದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.
ಮಹಿಳೆಯ ಆರೋಗ್ಯದ ಬಗ್ಗೆ ವರದಿ ನೀಡುವಂತೆ ಸುಪ್ರಿಂ ಕೋರ್ಟ್ ಸರ್ಕಾರಿ ವ್ಯದ್ಯರಿಗೆ ಸೂಚಿಸಿತ್ತು. ವೈದ್ಯರ ಮಂಡಳಿ ಸಂಪೂರ್ಣವಾಗಿ ಪರೀಕ್ಷಿಸಿ ಗರ್ಭಪಾತ ಮಾಡಬಹುದು ಎಂದು ಕೋರ್ಟ್ ಗೆ ವರದಿ ಸಲ್ಲಿಸಿತ್ತು. ವೈದ್ಯರ ವರದಿಯನ್ನಾಧರಿಸಿ ದ್ವಿಸದಸ್ಯ ಪೀಠ ತಕ್ಷಣವೇ ಗರ್ಭಪಾತ ಮಾಡಿಸಿಕೊಳ್ಳಲು ಆದೇಶ ನೀಡಿದೆ.
1971ರ ಗರ್ಭೀಣಿಯರ ವೈದ್ಯಕೀಯ ಟರ್ಮಿನೇಷನ್ ಕಾಯಿದೆಯಡಿ, 20 ವಾರಗಳವರೆಗೂ ಗರ್ಭಿಣಿಯರು ಗರ್ಭಪಾತ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ, 20 ವಾರದ ನಂತರ ಸಮಸ್ಯೆಯುಂಟಾದರೆ ಗರ್ಭಪಾತ ಮಾಡಿಕೊಳ್ಳಲು ಗರ್ಭಿಣಿಯರಿಗೆ ಅವಕಾಶವಿರಲಿಲ್ಲ. ಈ ಕಾನೂನನ್ನು ಮಾರ್ಪಡಿಸಬೇಕೆಂದು ಹಲವು ಮಹಿಳೆಯರು ಸುಪ್ರೀಂಕೋರ್ಟ್ ಮೋರೆ ಹೋಗಿದ್ದರು. ಕೆಲವು ಪ್ರಕರಣಗಳಲ್ಲಿ 24 ವಾರಗಳವರೆಗೂ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ಕೆಲವನ್ನು ತಿರಸ್ಕರಿಸಿತ್ತು.