ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶೇ 50ರಷ್ಟು ಚಾಲಕ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುವ ವಿಶೇಷ ನೀತಿಯೊಂದನ್ನು ರಾಜ್ಯ ಸರಕಾರ ರೂಪಿಸುತ್ತಿದೆ. ಮಹಾನಗರ ಸಾರಿಗೆ ಸಂಸ್ಥೆಗೆ ಈ ನೀತಿ ಅನ್ವಯವಾಗಲಿದೆ. ಸಾರಿಗೆ ಸಚಿವ ಎಚ್.ಎಂ ರೇವಣ್ಣ ಕಳೆದ ಶುಕ್ರವಾರ ಕೆಸ್ಸಾರ್ಟಿಸಿ ಮತ್ತು ಬಿಎಂಟಿಸಿಯ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಬಸ್ಸುಗಳ ಚಾಲಕರ ಹುದ್ದೆಗೆ ಸೇರಬಯಸುವ ಮಹಿಳೆಯರಿಗೆ ವಿಶೇಷ ಪ್ರೋತ್ಸಾಹ ನೀಡುವ ಕರಡು ನೀತಿ ರೂಪಿಸುವಂತೆ ಸೂಚಿಸಿದ್ದಾರೆ. ಬಸ್ ಚಾಲಕರಾಗಬಯಸುವ ಮಹಿಳೆಯರಿಗೆ ತರಬೇತಿ ಹಾಗೂ ವಿಶೇಷ ಸ್ಟೈಪೆಂಡ್ ಕೂಡ ನೀಡಲಾಗುವುದು ಎಂದು ಸಚಿವರು ತಿಳಿಸಿದರು.