ಇಂದಿನಿಂದ ರಾಜ್ಯಾಧ್ಯಂತ “ಅವನೇ ಶ್ರೀಮನ್ನಾರಾಯಣ” ನ ದರ್ಶನ…

204
firstsuddi

ಬೆಂಗಳೂರು : ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ನಟಿ ಶಾನ್ವಿ ಶ್ರೀವಾತ್ಸವ್ ಅವರು ಅಭಿನಯದ “ಅವನೇ ಶ್ರೀಮನ್ನಾರಾಯಣ” ಚಿತ್ರ ಇಂದು ರಾಜ್ಯಾಧ್ಯಂತ ಬಿಡುಗಡೆಯಾಗಿದ್ದು, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. 1980ರ ಕಾಲಘಟ್ಟದ ಚಿತ್ರ ಇದಾಗಿದ್ದು, ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ವೇಳೆ ಹೊಳೆದ ಶ್ರೀಮನ್ನಾರಾಯಣ ಚಿತ್ರದ ಕಥೆಯನ್ನು ಸ್ವತಃ ರಕ್ಷಿತ್ ಶೆಟ್ಟಿ ಅವರೇ ರಚಿಸಿದ್ದಾರೆ. ಗುರುವಾರ ನಗರದ ಊರ್ವಶಿ ಚಿತ್ರಮಂದಿರದಲ್ಲಿ ಅದ್ದೂರಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಪ್ರೀಮಿಯರ್ ಶೋನಲ್ಲಿ ರವಿಚಂದ್ರನ್, ಶಿವರಾಜ್ ಕುಮಾರ್, ರಿಷಬ್ ಶೆಟ್ಟಿ, ಅವರು ಸೇರಿದಂತೆ ಚಿತ್ರರಂಗ ಕಲಾವಿದರು ಸಿನಿಮಾವನ್ನು ವೀಕ್ಷಿಸಿ ರಕ್ಷಿತ್ ಶೆಟ್ಟಿ ಅವರಿಗೆ ಹ್ಯಾಟ್ಸಾಫ್ ಹೇಳಿದ್ದು, ಈಗಾಗಲೇ ಇನ್ಸ್ಟಾಗ್ರಾಮ್, ಫೇಸ್‍ಬುಕ್, ಟ್ವಿಟರ್‍ನಲ್ಲಿ ಶ್ರೀಮನ್ನಾರಾಯಣನ ಭಜನೆ ಜೋರಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಪ್ರಕಾಶ್ ನಿರ್ಮಾಣದ 30ಕೋಟಿ ವೆಚ್ಚದ “ಅವನೇ ಶ್ರೀಮನ್ನಾರಾಯಣ” ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.