ಪ್ರಿಯತಮೆಯ ಪತಿಯನ್ನೆ ಕೊಲೆಗೈದು ಮೂಟೆಕಟ್ಟಿದ ಪ್ರಿಯತಮ…

1050
firstsuddi

ಮೂಡಿಗೆರೆ: ಕಳಸ ಸಮೀಪದ ಭದ್ರಾ ನದಿಯ ಈಚಲು ಹೊಳೆಯಲ್ಲಿ ಪತ್ತೆಯಾದ ಮೃತದೇಹ ಬೆಂಗಳೂರಿನಲ್ಲಿ ಕೊಲೆಯಾದ ವ್ಯಕ್ತಿ ನವಾಜ್(30) ನ ಮೃತದೇಹ ಎಂದು ದೃಡಪಟ್ಟಿದ್ದು, ಭದ್ರಾ ನದಿಯ ಕುದುರೆಮುಖ ಠಾಣಾ ವ್ಯಾಪ್ತಿಯ ಈಚಲು ಹೊಳೆಯಲ್ಲಿ ಸೋಮವಾರ ಅಪರಿಚಿತ ವ್ಯಕ್ತಿಯ ಶವವನ್ನು ಸ್ಥಳಿಯರು ಗಮನಿಸಿ ಕುದುರೆಮುಖ ಪೊಲೀಸ್ ಠಾಣೆಗೆ ಸುದ್ಧಿ ಮುಟ್ಟಿಸಿದ್ದರು.ಕುದುರೆಮುಖ ವೃತ್ತ ನಿರೀಕ್ಷಕ ರಾಮಚಂದ್ರರವರ ಮಾರ್ಗದರ್ಶನದಲ್ಲಿ ಮೃತದೇಹವನ್ನು ಸ್ಥಳಿಯ ಮುಳುಗುತಜ್ಞ ಭಾಸ್ಕರ್ ರವರು ಸುಮಾರು ಎರಡು ಕಿಮೀ ದೂರದಿಂದ ಶವವನ್ನು ನದಿಯ ದಡಕ್ಕೆ ತಂದು ಮುಟ್ಟಿಸಿದ್ದರು.ಕಳೆದ ಎಂಟು ದಿನಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಕೊಲೆಯಾಗಿರುವ ಪ್ರಕರಣವೊಂದು ದಾಖಲಾಗಿತ್ತು.ಆ ಶವವನ್ನು ಕಳಸ ಸಮೀಪದ ಕುದುರೆಮುಖದಲ್ಲಿ ನದಿಗೆ ಎಸೆದಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದರು.ಬೆಂಗಳೂರು ವರ್ತೂರು ಪೊಲೀಸರು ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಕೊಲೆಯಾದ ವ್ಯಕ್ತಿಯ ಮೃತದೇಹ ಎಂದು ದೃಡ ಪಡಿಸಿದ್ದಾರೆ.

ಘಟನೆಯ ವಿವರ.
ಒಂದು ವರ್ಷದ ಹಿಂದ ಆಯಿಷಾ ಮತ್ತು ನವಾಜ್ ಇಬ್ಬರೂ ಎರಡನೆಯ ಮದುವೆಯಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಆಗ ಪ್ರಮುಖ ಆರೋಪಿ ಶಿವಕುಮಾರ್ ಗೆ ಆಯಿಷಾಳ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು.ಪ್ರಾರಂಭದಲ್ಲಿ ಆಯಿಷಾಳಿಗೆ ಮದುವೆಯಾದ ವಿಚಾರ ಶಿವಕುಮಾರ್ ಗೆ ಗೊತ್ತಿರಲಿಲ್ಲ.ಮದುವೆಯಾದ ವಿಚಾರ ಗೊತ್ತಾದ ಮೇಲೆ ಆಯಿಷಾಳನ್ನು ಹೇಗಾದರೂ ಮಾಡಿ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದ ಶಿವಕುಮಾರ ಪ್ರೇಯಸಿಯ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ.ಅದರಂತೆ ತನ್ನ ಸಹಚರರ ಜೊತೆಗೂಡಿ ಕ್ಯಾಂಟರ್ ವಾಹನದ ಚಾಲಕನಾಗಿದ್ದ ನವಾಜ್‍ ಗೆ ಆಗಸ್ಟ್ 20ರಂದು ನಸುಕಿನ ಜಾವ ಬಾಡಿಗೆಗೆಂದು ಕರೆ ಮಾಡಿದ್ದ.ನವಾಜ್ ಯಾರೋ ಕರೆ ಮಾಡಿದ್ದಾರೆಂದು ಮನೆಯಿಂದ ಹೊರಹೋಗಿದ್ದ.ಬಾಡಿಗೆಗೆ ಕರೆಸಿಕೊಂಡ ಶಿವಕುಮಾರ್ ಮತ್ತು ಆತನ ಸಹಚರರು ನವಾಜ್ಮೇಲೆ ಹಲ್ಲೆ ಮಾಡಿ ಕುತ್ತಿಗೆ ಕೊಯ್ದು ಕೊಲೆ ಮಾಡಿ ಇಟಿಯೋಸ್ ಕಾರಿನ ಡಿಕ್ಕಿಯಲ್ಲಿಟ್ಟಿದ್ದರು.ಆರೋಪಿಗಳು ಮೃತದೇಹವನ್ನು ಕುದುರೆಮುಖ ಸಮೀಪಕ್ಕೆ ತಂದು ಅಲ್ಲಿ ಮದ್ಯಾಹ್ನದ ಸಮಯಕ್ಕೆ ಭದ್ರಾ ನದಿಗೆ ಎಸೆದು ಪರಾರಿಯಾಗಿದ್ದರು.

ಇತ್ತ ಗಂಡ ಮನೆಗೆ ಬಾರದಿದ್ದಾಗ ಪತಿ ಮೋಬೈಲ್‍ಗೆ ಕರೆ ಮಾಡಿದ್ದಳು.ಮೊಬೈಲ್ ಸ್ವಿಚ್ ಆಪ್ ಆಗಿದ್ದ ಕಾರಣ ವರ್ತೂರ್ ಪೋಲೀಸ್ ಠಾಣೆಗೆ ದೂರು ನೀಡಿದ್ದರು.ಎರಡು ದಿನಗಳ ನಂತರ ನವಾಜ್ ಪೋಷಕರು ಕೂಡ ದೂರು ನೀಡಿದ್ದರು.ಪ್ರತ್ಯೇಕ ಎರಡು ದೂರಗಳನ್ನು ಆದರಿಸಿ ತನಿಖೆ ನಡೆಸಿದ ಪೊಲೀಸರು ನವಾಜ್‍ನ ಮೊಬೈಲ್‍ನ ಸಿಡಿಆರ್ ಪರಿಶೀಲನೆ ನಡೆಸಿದ್ದರು.ತನಿಖೆ ವೇಳೆ ಶಿವಕುಮಾರ್ ಸ್ನೇಹಿತ ಪವನ್ ಪೊಲೀಸರ ಕೈಗೆ ಸಿಕ್ಕಿದ್ದ.ಪವನ್ ವಿಚಾರಣೆ ವೇಳೆ ಕೊಲೆ ಮಾಡಿದ್ದು ಬೆಳಕಿಗೆ ಬಂದಿತ್ತು.ಬಳಿಕ ಶಿವಕುಮಾರ್ ಸಹಿತ ನಾಲ್ವರನ್ನು ಬಂದಿಸಿದ ಪೊಲೀಸರು ವಿಚಾರಣೆ ವೇಳೆ ಕೊಲೆ ಹಿಂದಿನ ಕಾರಣವನ್ನು ಶಿವಕುಮಾರ್ ಹೇಳಿದ್ದ.