ದೇವೇಗೌಡರಿಂದ ಸರ್ಕಾರಿ ಭೂಮಿ ಕಬಳಿಕೆ: ಎ. ಮಂಜು ಆರೋಪ…

975
firstsuddi

 ಹಾಸನ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ವಿರುದ್ಧ ಮಾಜಿ ಸಚಿವ ಎ. ಮಂಜು ಸರ್ಕಾರಿ ಭೂ ಕಬಳಿಕೆಯ ಗಂಭೀರ ಆರೋಪ ಮಾಡಿದ್ದಾರೆ. ತಾಲೂಕಿನ ದುದ್ದ ಹೋಬಳಿಯ ಸೋಮನಹಳ್ಳಿ ಕಾವಲಿನಲ್ಲಿರುವ ಸರ್ಕಾರಿ ಜಾಗವನ್ನು ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಗೂ ಅತ್ತೆ ಕಾಳಮ್ಮನವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಲಾಗಿದೆ. ಅಧಿಕಾರಿಗಳು ಕಾನೂನು ಬಾಹಿರವಾಗಿ ಭೂಮಿ ಸಾಗುವಳಿ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡು ಸರ್ಕಾರ ಕಬಳಿಕೆಯಾಗಿರುವ ಭೂಮಿ‌ ಜಪ್ತಿ ಮಾಡಬೇಕು. ಇಲ್ಲವಾದರೆ  ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎ. ಮಂಜು ಎಚ್ಚರಿಕೆ ನೀಡಿದ್ದಾರೆ.