ದೆಹಲಿಯ ಭಾಟಿಯಾ ಕುಟುಂಬದ ಸಾಮೂಹಿಕ ಆತ್ಮಹತ್ಯೆಗೆ ಹೊಸ ಸುಳಿವು

536
firstsuddi

ನವದೆಹಲಿ: ಭಾಟಿಯಾ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡವರೆಲ್ಲ ಕಣ್ಣು, ಬಾಯಿ, ಕೈಗಳಿಗೆ ಬಟ್ಟೆ ಕಟ್ಟಿಕೊಂಡಿದ್ದರು. ಪೊಲೀಸರಿಗೆ ಮನೆಯಲ್ಲಿ ಆಧ್ಯಾತ್ಮಿಕ ಸೂಚನೆಗಳನ್ನು ಒಳಗೊಂಡ ಪುಸ್ತಕವೊಂದು ದೊರಕಿದ್ದು ಇದರಲ್ಲಿ ಹಲವು ಮಾಹಿತಿಗಳು ಲಭ್ಯವಾಗಿವೆ.ಮನುಷ್ಯನ ದೇಹ ಶಾಶ್ವತವಲ್ಲ. ಆತ್ಮವಷ್ಟೇ ಶಾಶ್ವತ. ಕಣ್ಣು ಮತ್ತು ಬಾಯಿಯನ್ನು ಮುಚ್ಚುವ ಮೂಲಕ ಭಯದಿಂದ ಹೊರ ಬರಬಹುದು ಜೊತೆಗೆ ಕೈ-ಕಾಲನ್ನು ಕಟ್ಟಿ ಹಾಕುವುದು ಹೇಗೆ ಎಂದು ಆ ಪುಸ್ತಕದಲ್ಲಿ ವಿವರಿಸಲಾಗಿದ್ದು .ಇದರಿಂದ ಇದು ಹತ್ಯೆಯಲ್ಲ, ಮೂಢನಂಬಿಕೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸಂದೇಹವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

firstsuddi

ಕುಟುಂಬದ  ನಾರಾಯಣಿ ಭಾಟಿಯಾ (77), ನಾರಾಯಣಿ ಅವರ ಹಿರಿಯ ಮಗಳು ಪ್ರತಿಭಾ (57) ಮಕ್ಕಳಾದ ಭಾವನೇಶ್ (50) ಮತ್ತು ಲಲಿತ್ (45), ಸವಿತಾ ಭಾವನೇಶ್ (48) ಮತ್ತು ತೀನಾ ಲಲಿತ್ (42). ಭಾವನೇಶ್ ಅವರ ಮಕ್ಕಳಾದ ನೀತು (25), ಮೊನು (23) ಮತ್ತು ದೃವ (15) ಹಾಗು ಲಲಿತ್ ಅವರ ಮಗ ಶಿವಂ (15). ಮೊಮ್ಮಗಳು ಪ್ರಿಯಾಂಕಾ (33) ಆತ್ಮಹತ್ಯೆ ಮಾಡಿಕೊಂಡವರು.