ಖಾಸಗಿ ಹೊಟೇಲ್‍ನಲ್ಲಿ ಬ್ಯೂಟಿಷಿಯನ್ ಆಗಿದ್ದ ಮಹಿಳೆ ಶವ ಪತ್ತೆ…

481
firstsuddi

ಮೈಸೂರು- ನಗರದ ಪ್ರತಿಷ್ಠಿತ ಖಾಸಗಿ ಹೊಟೇಲ್‍ನಲ್ಲಿ ಬ್ಯಟೀಷೀಯನ್ ಆಗಿದ್ದ ರಮ್ಯಾ, ಎಂಬುವವರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟಿರುವ ಮಹಿಳೆ ಹಾಸನ ಜಿಲ್ಲೆ ಜನಿವಾರ ಗ್ರಾಮದ ವಾಸಿಯಾಗಿದ್ದು ಆರು ವರ್ಷಗಳ ಹಿಂದೆ ಆನಂದ್ ಎಂಬುವವರನ್ನು ಮದುವೆಯಾಗಿದ್ದು, ಕಳೆದ ಎರಡು ವರ್ಷದ ಹಿಂದೆ ಇವರಿಬ್ಬರ ಮಧ್ಯೆ ವೈಮನಸ್ಸುಂಟಾಗಿ ಬೇರೆಯಾಗಿದ್ದರು. ಇತ್ತೀಚೆಗೆ ಮೊದಲನೆ ಗಂಡನಿಂದ ದೂರವಾದ ಬಳಿಕ ಸುನೀಲ್‍ಎಂಬುವವರ ಜೊತೆಯಲ್ಲಿದ್ದರು ಎನ್ನಲಾಗಿದೆ.ಆದರೆ ನಿನ್ನೆ ರಾತ್ರಿ ರಮ್ಯ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಮಹಿಳೆಯ ಪೋಷಕರು ಸುನೀಲ್ ಎಂಬಾತನೇ ಆಕೆಯನ್ನು ಕೊಲೆ ಮಾಡಿದ್ದನೆಂದು ಆಲನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.