ಭೀಕರ ಅಪಘಾತದಲ್ಲಿ ನಟ ನಂದಮೂರಿ ಹರಿಕೃಷ್ಣ ದುರ್ಮರಣ…

790
firstsuddi

ಹೈದರಾಬಾದ್- ಆಂಧ್ರಪ್ರದೇಶದ ನಲ್ಲಗೊಂಡ ಬಳಿ ಬುಧವಾರ ಬೆಳಗಿನ ಜಾವ ಸುಮಾರು 4-30ರ ವೇಳೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಟ ನಂದಮೂರಿ ಹರಿಕೃಷ್ಣ(61) ದುರ್ಮರಣಕ್ಕೀಡಾಗಿದ್ದಾರೆ. ಹರಿಕೃಷ್ಣ ಅವರೇ ಕಾರು ಚಾಲನೆ ಮಾಡಿಕೊಂಡು ಅಭಿಮಾನಿಯೊಬ್ಬರ ಮಗನ ವಿವಾಹ ಸಮಾರಂಭಕ್ಕಾಗಿ ನಲ್ಲೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಾರ್ಕೆಟ್ ಪಲ್ಲಿ-ಆದಂಕಿ ಹೆದ್ದಾರಿಯಲ್ಲಿ ಎದುರು ಇದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿದಾಗ ಕಾರು ನಿಯಂತ್ರಣ ತಪ್ಪಿ ಉರುಳಿದ್ದು, ಅಪಘಾತದಲ್ಲಿ ಹರಿಕೃಷ್ಣ ಅವರ ತಲೆಗೆ ಗಂಭೀರ ಗಾಯವಾಗಿದ್ದು, ನಾರ್ಕೆಟ್ ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.