ಹೆಬ್ಬುಲಿ ಸಿನಿಮಾದ ನಾಯಕಿಯಾಗಿ ಅಭಿನಯಿಸಿದ್ದ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ

1496

ಬೆಂಗಳೂರು: ಸ್ಯಾಂಡಲ್‍ವುಡ್ ನ ಹೆಬ್ಬುಲಿ ಸಿನಿಮಾದಲ್ಲಿ ಕಿಚ್ಚ ಸುದೀಪ್‍ಗೆ ನಾಯಕಿಯಾಗಿ ಅಭಿನಿಯಿಸಿದ್ದ ನಟಿ ಅಮಲಾ ಪೌಲ್ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಮಲೇಷಿಯಾದಲ್ಲಿ ನಡೆಯಲಿರುವ ಕಾರ್ಯಕ್ರಮಯೊಂದಕ್ಕೆ ಅವರು ಡ್ಯಾನ್ಸ್ ನನ್ನು ಅಭ್ಯಾಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅಮಲಾ ಪೌಲ್ ಆರೋಪಿಸಿದ್ದಾರೆ. ನಂತರ ಚೆನ್ನೈನಲ್ಲಿರುವ ಟಿ.ನಗರ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ದೂರು ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅಮಲಾ ಪೌಲ್, ನಾನು ಮಲೇಷಿಯಾದ ಕಾರ್ಯಕ್ರಮಯೊಂದಕ್ಕೆ ಹೋಗಬೇಕಿತ್ತು. ಆದ್ದರಿಂದ ಆ ಕಾರ್ಯಕ್ರಮಕ್ಕಾಗಿ ನಾನು ಡ್ಯಾನ್ಸ್ ಅಭ್ಯಾಸಕ್ಕೆ ಹೋಗಿದ್ದೆ. ನಾನು ಅಭ್ಯಾಸ ಮಾಡುತ್ತಿದ್ದಾಗ ಒಬ್ಬ ವ್ಯಕ್ತಿ ನಾನು ಅವರಿಗೆ ತಿಳಿದಿರುವಂತೆ ಬಂದು ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಬಳಿಕ ನಾನು ಒಬ್ಬಂಟಿಯಾಗಿ ಇದ್ದಾಗ ಅಸಭ್ಯವಾಗಿ ನನ್ನೊಂದಿಗೆ ಮಾತನಾಡಿದರು. ನನಗೆ ತಕ್ಷಣ ಆಘಾತವಾಯಿತು. ಆದ್ದರಿಂದ ನಾನು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.

ಆ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ಆದರೆ ಈ ಘಟನೆಯಿಂದ ನನಗೆ ಸುರಕ್ಷಿತ ಇಲ್ಲ ಎಂದು ಭಾವನೆ ಉಂಟಾಯಿತು. ನಾನೊಬ್ಬ ಸ್ವತಂತ್ರ ಮಹಿಳೆಯಾಗಿದ್ದೇನೆ. ಯಾರೋ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ನಗರದ ಪ್ರಸಿದ್ಧ ನೃತ್ಯ ನಿರ್ದೇಶಕ ಶ್ರೀಧರನ ನೃತ್ಯ ಸ್ಟುಡಿಯೊದಲ್ಲಿ ನಡೆದಿದೆ. ಆದರೆ ಆ ಸಮಯದಲ್ಲಿ ಅವರು ಅಲ್ಲಿ ಇರಲಿಲ್ಲ ಎಂದು ಅಮಲಾ ಪೌಲ್ ತಿಳಿಸಿದ್ದಾರೆ. ಅಮಲಾ ಪೌಲ್ ಅವರು ಮಲೇಷಿಯಾದಲ್ಲಿ `ಡ್ಯಾಜ್ಲಿಂಗ್ ಥೈಮಿಝಾಚಿ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ನಾನು ಮಹಿಳಾ ಸಬಲೀಕರಣ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದೇನೆ. ಮಹಿಳೆಯರಿಗೆ ಸಮಾಜದಲ್ಲಿ ಭದ್ರತೆ ಇಲ್ಲ. ಮಾತುಗಳ ಮೂಲಕ ಕೈಗಳ ಮೂಲಕ ಲೈಂಗಿಕ ಕ್ರಿಯೆ ಹೆಚ್ಚುತ್ತಿದೆ. ನನ್ನನ್ನು ಲೈಂಗಿಕವಾಗಿ ಕಿರುಕುಳ ನೀಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಟಿಯ ಪರಿಸ್ಥಿತಿಯೇ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಆಸಕ್ತಿಯನ್ನು ವಹಿಸಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಾರಸ್ಥ ಅಝೇಗೆಸನ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.