ನವದೆಹಲಿ : ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಚುನಾವಣಾ ಪೂರ್ವ ಇಂಡಿಯಾ ಟುಡೆ ಗ್ರೂಪ್, ಆ್ಯಕ್ಷಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಬಿಜೆಪಿಗೆ 115 ರಿಂದ 125 ಸ್ಥಾನ ಸಿಗುವ ಸಾಧ್ಯತೆಯಿದ್ದು, ಕಾಂಗ್ರೆಸ್’ಗೆ 57 ರಿಂದ 65 ಸ್ಥಾನ ಸಿಗಬಹುದು ಎಂದು ಸಮೀಕ್ಷೆ ಹೇಳಿದೆ. ಇತರೆ ಪಕ್ಷಗಳಿಗೆ 3 ಸ್ಥಾನ ಸಿಗುವ ಸಾಧ್ಯತೆ ಇದ್ದು, ಹಾರ್ದಿಕ್ ಪಟೇಲ್ ಬೆಂಬಲಿತರಿಗೆ ಯಾವುದೇ ಫಲಿತಾಂಶವಿಲ್ಲ ಎಂದು ಇಂಡಿಯಾ ಟುಡೇ – ಌಕ್ಸಿಸ್ ಮೈ ಇಂಡಿಯಾ ಗ್ರೂಪ್ ಸಮೀಕ್ಷೆ ಸ್ಪಷ್ಟಪಡಿಸಿದೆ.ಶೇಕಡವಾರು ಬಿಜೆಪಿ ಶೇ.48ರಷ್ಟು ಮತಗಳನ್ನ ಗಳಿಸೋ ಸಾಧ್ಯತೆಯಿದ್ದರೆ, ಕಾಂಗ್ರೆಸ್ ಶೇ.38ರಷ್ಟು ಮತಗಳನ್ನ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.