ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಹವಾಮಾನ ಸರಿಹೋಗುವವರೆಗೂ ಪ್ರವಾಸಿಗರಿಗೆ ಶಿಬಿರದಲ್ಲೇ ಇರುವಂತೆ ಸೂಚಿಸಲಾಗಿದೆ. ಈಗಾಗಲೇ ಪ್ರಾರಂಭವಾಗಿದ್ದ ಅಮರನಾಥ ಯಾತ್ರೆ ಹವಾಮಾನ ವೈಪರಿತ್ಯದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ವರ್ಷ ಅಮರನಾಥ ಯಾತ್ರೆಗೆ ಎರಡು ಲಕ್ಷ ಜನರು ನೋಂದಣಿ ಮಾಡಿದ್ದಾರೆ.60 ದಿನಗಳ ಕಾಲ ನಡೆಯಲಿರುವ ಅಮರನಾಥ ಯಾತ್ರೆಗೆ ಜೂನ್ 27ರಂದು ಮೊದಲ ಬ್ಯಾಚ್ ಪ್ರಯಾಣ ಆರಂಭಿಸಿತ್ತು. ಆದರೆ ಭಾರೀ ಮಳೆಯಿಂದಾಗಿ ಪ್ರಯಾಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.