ನಟಿಯೊಬ್ಬರು ಫಿಲ್ಮ್ ಚೆಂಬರ್ ವಿರುದ್ಧ ನಡುರಸ್ತೆಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ

565

ಹೈದರಾಬಾದ್: ಟಾಲಿವುಡ್ ನಟಿಯೊಬ್ಬರು ಫಿಲ್ಮ್ ಚೆಂಬರ್ ವಿರುದ್ಧ ನಡುರಸ್ತೆಯಲ್ಲಿ ಅರೆಬೆತ್ತಲೆಯಾಗುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ಹೈದರಾಬಾದ್ ನಗರದ ಫಿಲ್ಮ್ ನಗರದಲ್ಲಿ ನಡೆದಿದೆ. ಟಾಲಿವುಡ್‍ನ ಕೆಲ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಶ್ರೀ ರೆಡ್ಡಿ ಅಲ್ಲಿನ ಫಿಲ್ಮ್ ಚೆಂಬರ್ ವಿರುದ್ಧ ನಡುರಸ್ತೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

ಇಂದು ಹೈದರಾಬಾದ್ ನಗರದ ಫಿಲ್ಮ ಚೆಂಬರ್ ಮುಂದೇ ಆಗಮಿಸಿದ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಟಾಲಿವುಡ್ ಹಿರೋಯಿನ್ ಆಗಿ ಗುರುತಿಸಿಕೊಂಡಿದ್ದರು ತಮಗೇ ಸಿನಿಮಾ ನಟರ ಆಸೋಸಿಯೇಷನ್ ಸಂಸ್ಥೆಯಲ್ಲಿ ಸದಸ್ಯತ್ವ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಪ್ರತಿಭಟನೆ ಬಳಿಕವೂ ಸಂಸ್ಥೆ ತಮಗೆ ಸದಸ್ಯತ್ವ ನೀಡದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಟಿ ಶ್ರೀ ರೆಡ್ಡಿ ಟಾಲಿವುಡ್ ಅಂಗಳದಲ್ಲಿನ ಕಾಸ್ಟಿಂಗ್ ಕೋಚ್ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು.