ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್, ವಾಟ್ಸಾಪ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದು, ಇವ್ಯಾವೂ ಇಲ್ಲದೇ ಜನರು ಜನರು ಬದುಕೋಕೆ ಆಗೋದೇ ಇಲ್ಲವೆಂಬಂತೆ ಹೊಂದಿಕೊಂಡು ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಖ್ಯಾತಿ ಗಳಿಸಿರೋ ಫೇಸ್ ಬುಕ್ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡಲಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಫೇಸ್ ಬುಕ್ ಬಳಕೆಯಿಂದ ಮಾನಸಿಕ ನೆಮ್ಮದಿ ಹಾಳಾಗೋದಷ್ಟೇ ಅಲ್ಲದೇ, ಮಿದುಳಿನ ಸಮತೋಲನವನ್ನ ಹಾಳು ಮಾಡುತ್ತದೆ ಎಂದು ಅಮೇರಿಕಾದ ಡಿಪೌಲ್ ವಿಶ್ವವಿದ್ಯಾಲಯದ ಸಂಶೋಧಕರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪೇಸ್ ಬುಕ್ ಎಲ್ಲಾದರೂ ಒಂದು ಕಡೆ ನಿಂತು ಬಳಕೆ ಮಾಡಿದ್ರೆ ಸಮಸ್ಯೆಯಾಗೋದಿಲ್ಲ, ಕಾರು ಓಡಿಸೋದ್ರಿಂದ ಹಿಡಿದು, ಬೇರೆ ಯಾವುದೇ ಕೆಲಸ ಮಾಡುತ್ತಿದ್ದರೂ ಫೇಸ್ ಬುಕ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಸಭೆ – ಸಮಾರಂಭ ಎಲ್ಲೇ ಹೋದರೂ ಕಾರ್ಯಕ್ರಮದ ಕಡೆ ಗಮನ ಬಿಟ್ಟು ಫೇಸ್ ಬುಕ್ ಬಳಕೆ ಮಾಡುತ್ತಾ ಇರುತ್ತಾರೆ. ಇದರಿಂದ ಮಿದುಳಿನ ಕಾರ್ಯಶಕ್ತಿ ಅಸಮತೋಲನಗೊಳ್ಳುವ ಸಾಧ್ಯತೆಯಿದೆ ಎಂದು ಫೇಸ್ ಬುಕ್ ಸಂಶೋಧಕರು ತಿಳಿಸಿದ್ದಾರೆ. ಇದಕ್ಕಾಗಿ ಫೇಸ್ ಬುಕ್ ಬಳಕೆ ಮಾಡುವ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನ ಹಾಗೂ ಬಳಕೆ ಮಾಡದ 340 ವಿದ್ಯಾರ್ಥಿಗಳನ್ನ ಬಳಕೆ ಮಾಡಿಕೊಳ್ಳಲಾಗಿತ್ತು. ಫೇಸ್ ಬುಕ್ ಬಳಕೆ ಮಾಡುವವರಲ್ಲಿ ಚುರುಕುತನ ಹಾಗೂ ವಿಚಾರವನ್ನ ಗ್ರಹಿಸುವುದರಲ್ಲಿ ನಿಧಾನಗತಿ ಕಂಡು ಬಂದಿತ್ತು.