ಎನ್.ಆರ್ ಪುರ ತಾಲೂಕಿನಲ್ಲಿ ಆಟಿಡೊಂಜಿ ಕಾರ್ಯಕ್ರಮಕ್ಕೆ ಚಾಲನೆ…

939

ಚಿಕ್ಕಮಗಳೂರು- ದಕ್ಷಿಣ ಕನ್ನಡ ಪ್ರಾಂತ್ಯದ ಸಾಂಸ್ಕøತಿಕ ಕಲೆ ಆಟಿಡೊಂಜಿ ಕ್ರೀಡೆ ಕಾಫಿನಾಡಿಗೂ ಕಾಲಿಟ್ಟಿದೆ. ಗ್ರಾಮೀಣ ಕ್ರೀಡೆಯನ್ನ ಉಳಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಮಲೆನಾಡಿಗೆ ಕಾಲಿಟ್ಟಿರೋ ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವ್ರು ಭಾಗಿಯಾಗಿದ್ರು. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಅಂಬಳಿಕ ಗ್ರಾಮದಲ್ಲಿ ಈ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದು, ಕೊಪ್ಪ, ಶೃಂಗೇರಿ, ಎನ್.ಆರ್.ಪುರದ 300 ಕ್ಕೂ ಅಧಿಕ ಜನ ಭಾಗವಹಿಸಿದ್ರು. ಮಹಿಳೆಯರು ಮಲೆನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು ಗದ್ದೆಯೊಳಗೆ ಕುಣಿದು ಕುಪ್ಪಳಿಸಿದ್ರು. ಪಾಶ್ಚಿಮಾತ್ಯ ಸಂಸ್ಕøತಿಯನ್ನ ಮೈಗೂಡಿಸಿಕೊಳ್ತಿರೋ ಆಧುನಿಕ ಭಾರತದಲ್ಲಿ ದೇಶಿಯ ಗ್ರಾಮೀಣ ಕ್ರೀಡೆಯನ್ನ ಉಳಿಸುವ ನಿಟ್ಟಿನಲ್ಲಿ ಹುಡುಗ-ಹುಡುಗಿಯರು, ಮಹಿಳೆಯರು ಹಾಗೂ ಪುರುಷರು ಸಾಂಪ್ರಾದಾಯಿಕ ಉಡುಗೆ ತೊಟ್ಟು ಗದ್ದೆಯೊಳಗೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ರು. ಗ್ರಾಮೀಣ ಕಲೆಯನ್ನ ಉಳಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಲೆನಾಡಿಗರು ಗದ್ದೆಯೊಳಗೆ ವಿವಿಧ ಬಗೆಯ ಸಂಗೀತಕ್ಕೆ ನಾನಾ ರೀತಿಯಲ್ಲಿ ಡ್ಯಾನ್ಸ್ ಮಾಡಿ ಗ್ರಾಮೀಣ ಕ್ರೀಡೆಗಳು ಉಳಿದು ಬೆಳೆಯಲಿ ಎಂದು ಹಾರೈಸಿದ್ರು.