ಹಾಸನ- ಮಂಗಳೂರು ಬೆಂಗಳೂರು ರೈಲು ಸ್ಥಗಿತಗೊಂಡಿದ್ದು, ಮೂರು ದಿನದಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನಲೆ ಸಕಲೇಶಪುರ ಸಮೀಪದ ಯಡಕುಮಾರಿ ರೈಲು ಮಾರ್ಗ ಮೈಲು 218 ರಲ್ಲಿ ಭೂ ಕುಸಿತವಾಗಿದ್ದು, ಇದರಿಂದ ಯಶವಂತಪುರದಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲನ್ನು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರಿಗೆ ಟಿಕೇಟ್ ಹಣ ಹಿಂದಿರುಗಿಸಲಾಗಿದ್ದು, ಬದಲಾಗಿ ಆರು ಬಸ್ ಗಳ ಮೂಲಕ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.