ಬಿಗ್ ಬಾಸ್ ಸೀಸನ್ 5 ನ ವಿನ್ನರ್ ಕಿರೀಟ ಚಂದನ್ ಶೆಟ್ಟಿಗೆ , ಕಾಮನ್ ಮ್ಯಾನ್ ಗೆ ಸಿಕ್ತು ರನ್ನರ್ ಅಪ್

508

ಬಿಗ್’ಬಾಸ್ 5 ನೇ ಆವೃತ್ತಿಯ ವಿನ್ನರ್ ಆಗಿ ರ್ಯಾಪರ್ ಚಂದನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಇನ್ನು ರನ್ನರ್ ಅಪ್ ಆಗಿ ದಿವಾಕರ್ ಆಗಿದ್ದಾರೆ. 5 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ವಿನ್ನರ್ ಹೆಸರು ಘೋಷಣೆ ಮಾಡಿದರು.ಗ್ರ್ಯಾಂಡ್ ಫಿನಾಲೆಯ ಅಂತಿಮ ಸುತ್ತಿನಲ್ಲಿ ಜೆಕೆ. ಚಂದನ್ ಶೆಟ್ಟಿ ಹಾಗೂ ದಿವಾಕರ್ ಪ್ರಶಸ್ತಿಯ ಕಣದಲ್ಲಿದ್ದರು. ಆದರೆ ಮೂವರು ಸ್ಪರ್ಧಿಗಳಲ್ಲಿ ಮೊದಲು ಜೆಕೆ ಹೊರಬಿದ್ದರು. ಆನಂತರ ಸಾಕಷ್ಟು ಮಾತುಕತೆ, ತಮಾಶೆ, ಹಾಡು ಡ್ಯಾನ್ಸ್ ಬಳಿಕ  ಬಿಗ್ ಬಾಸ್ ಘೋಷಣೆ ಮಾಡಲಾಯಿತು.