ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಬಾಕ್ಸರ್ ಅಮಿತ್.

252
firstsuddi

ಜಕಾರ್ತಾ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 2018ರ ಏಷ್ಯನ್ ಗೇಮ್ಸ್ ನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತ ಚಿನ್ನಕ್ಕೆ ಗುರಿಯಿಟ್ಟಿದೆ.ಭಾರತದ ಅಮಿತ್  ಅವರು ಪುರುಷರ ವಿಭಾಗದ 49 ಕೆ.ಜಿ ವಿಭಾಗದ ಬಾಕ್ಸಿಂಗ್‍ನಲ್ಲಿ  ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಒಲಿಂಪಿಕ್ ನಲ್ಲಿ ಚಿನ್ನದ ಪದಕ ವಿಜೇತನಾಗಿರುವ ಉಜ್ಬೇಕಿಸ್ತಾನ್ ನ ಹಸನ್ಬಾಯ್ ಡಸ್ಮಾಟೊವ್ ಅವರನ್ನು ಫೈನಲ್ ಪಂದ್ಯದಲ್ಲಿ ಮಣಿಸುವ ಮೂಲಕ ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.