ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆದಾಗಿನಿಂದಲೂ ನೀಡುತ್ತಿರುವ ವಿಭಿನ್ನ ಹೇಳಿಕೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಟ ಪ್ರಕಾಶ್ ರೈ ಟ್ರೋಲ್ ಆಗುತ್ತಿದ್ದಾರೆ. ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ರೈ ಅವರ ವೈಯಕ್ತಿಕ ವಿಷಯವಾಗಿಯೂ ಮಾತನಾಡಿದ್ದಾರೆಂದು ಆರೋಪಿಸಿ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ ಮತ್ತು ಟ್ವಟರ್ ಅಕೌಂಟ್ನಲ್ಲಿ ಹಾಕಿರುವ ಪೋಸ್ಟ ಳ ವಿರುದ್ದ ಮೊಕದ್ದಮೆ ದಾಖಲಿಸಿದ್ದೇನೆ ಎಂದು ಅಸಮಧಾನ ಹೊರಹಾಕಿದರು.
ಇದೇ ವೇಳೆ ಅವರು ನನ್ನ ಮಗ ಸತ್ತಾಗಾ ಡ್ಯಾನ್ಯರ್ ಹಿಂದೆ ಓಡಿ ಹೋದೆ ಎಂದು ಮತ್ತು, ಮೋದಿ ಬಗ್ಗೆ ಮಾತನಾಡಿದ್ದಕ್ಕೆ ಹೀಗೆ ಮಾಡೋದು ಸರಿನಾ? ಗೌರಿ ಸಾವಿಗೆ ಬರುವ ಮುನ್ನ ಯಾರ ಮಗ್ಗಲಲ್ಲಿ ಮಲಗಿದ್ದೆ ಅಂತ ಬಂದಿರೊ ಲೇಖನ ಶೇರ್ ಮಾಡೋದು ಸರಿನಾ? ಮೋದಿ ಬಿಜೆಪಿ ನಾಯಕ ಎಂದು ನಾನು ಪ್ರಶ್ನೆ ಮಾಡಿಲ್ಲ. ನಾನು ದೇಶದ ಪ್ರಧಾನಿಗೆ ಪ್ರಶ್ನೆ ಮಾಡಿದ್ರೆ ತಪ್ಪಾ?
ನನ್ನ ವೈಯಕ್ತಿಕ ಹಾಗೂ ಸಾಂಸಾರಿಕ ವಿಚಾರಗಳ ಬಗ್ಗೆ ಟ್ವೀಟ್ ಮಾಡಿ ಅವಹೇಳನ ಮಾಡಿದ್ದಾರೆ. ಹಾಗಾಗಿ ನಾನು ಕಾನೂನು ಸಮರ ಆರಂಭಿಸಿದ್ದೇನೆ. ಮತ್ತು ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಹಾಗೂ ಟ್ವಿಟರ್ ಡಿಲಿಟ್ ಆಗಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ