ಮಂಡ್ಯದ ಸೀತಾಪುರದಲ್ಲಿ ಗದ್ದೆಗಿಳಿದು ನಾಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ.

744
firstsuddi

ಮಂಡ್ಯ: ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಾವೇ ಸ್ವತಃ ರೈತರಾಗಿ ಗದ್ದೆಗಿಳಿಯುವ ಮೂಲಕ ರೈತರ ಜೊತೆ ನಾಟಿ ಮಾಡಿ ನಂತರ ಮಂಡ್ಯ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ‘ರೈತನ ಕಷ್ಟ ಏನು ಎನ್ನುವುದು ನನಗೆ ಇಂದು ಕೆಸರು ಗದ್ದೆಯಲ್ಲಿ ಅರಿವಾಯಿತು. 25 ವರ್ಷಗಳ ಬಳಿಕ ಗದ್ದೆಗಿಳಿದು ಕೆಲಸ ಮಾಡಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಕಡೆ ಜೆಡಿಎಸ್ ಗೆಲ್ಲಿಸಿದ್ದೀರಿ, ಏಳೇಳು ಜನ್ಮಕ್ಕೂ ಮಂಡ್ಯ ಜನರ ಋಣ ತೀರಿಸಲು ಸಾಧ್ಯವಿಲ್ಲ.ರೈತರು ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಡಿ ರೈತರನ್ನು ಉಳಿಸುವ ಕೆಲಸವನ್ನು ಮಾಡುತ್ತೇನೆ.ಏನೇ ಕಷ್ಟ ಬಂದರು ವಿಧಾನ ಸೌದದ ಬಾಗಿಲು ಯಾವಾಗಲು ತೆರೆದಿರುತ್ತದೆ.ನನ್ನ ಮೇಲೆ ಯಾರು ಸಂಶಯ ಪಡಬೇಡಿ, ನಾನೂ ಕೆಲಸ ಮಾಡಲು ನೀವು ನನಗೆ ಪ್ರೊತ್ಸಾಹವನ್ನು ನೀಡಿ. ನಾನು ದುಪ್ಪಟ್ಟು ಕೆಲಸ ಮಾಡುತ್ತೇನೆ .ಮಂಡ್ಯ ನಗರ ಅಭಿವೃದ್ದಿಯಾಬೇಕೆಂಬುದು ನನ್ನ ಬಯಕೆ.ಮಂಡ್ಯದ ಸಕ್ಕರೆ ಕಾರ್ಖಾನೆಗೆ ಮರುಜೀವ ನೀಡುತ್ತೇನೆ. ನಾನು ಮಂಡ್ಯ ಜಿಲ್ಲೆಯಲ್ಲಿ ಭತ್ತದ ನಾಟಿ ಮಾಡಿದ ಮಾತ್ರಕ್ಕೆ ನಾನು ಮಂಡ್ಯಕ್ಕೆ ಸೀಮಿತವಲ್ಲ. ಇಡೀ ರಾಜ್ಯಕ್ಕೆ ನಾನು ಸಿಎಂ.ರೈತರಿಗೆ ಆಧುನಿಕ ಕೃಷಿ ಕಾರ್ಯಕ್ರಮಗಳನ್ನು ಅಳವಡಿಸಿಕಳ್ಳಬೇಕು ಈ ಬಗ್ಗೆ ನಾನು ನೀಲಿ ನಕ್ಷೆ ಹಾಕಿದ್ದೇನೆ. 37 ಕ್ಷೇತ್ರಗಳನ್ನು ಗೆದ್ದರು ನಾನೂ ಇಂದು ಮುಖ್ಯಮಂತ್ರಿ ಆಗಿದ್ದೇನೆ. ತಾಯಿ ಚಾಮುಂಡಿ ಈ ಬಾರಿ ನಮಗೆ ದಯೆ ತೋರಿದ್ದಾಳೆ. ನನ್ನ ರೈತ ಮುಂದೆಂದೂ ಸಾಲಗಾರನಾಗಬಾರದು . ಸಾಲ ಕೊಟ್ಟವರು ರೈತರ ಮನೆ ಬಾಗಿಲಿಗೆ ಬರಬಾರದು. 30 ಜಿಲ್ಲೆಗಳಲ್ಲೂ ತಿಂಗಳಿಗೆ ಒಂದು ದಿನ ಪ್ರವಾಸ ಮಾಡಲಿದ್ದು, ರೈತರ ಜೊತೆ ಚರ್ಚೆ ನಡೆಸಲಿದ್ದೇನೆ. ರೈತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ, ಗೌರಿ ಗಣೇಶ ಹಬ್ಬದೊಳಗೆ ರಾಜ್ಯದ ಆರುವರೆ ಕೋಟಿ ಜನರಿಗೂ ಸಿಹಿಸುದ್ದಿ ನೀಡಲಿದ್ದೇನೆ. ನಗರ ಬೇರೆಯಲ್ಲ, ಗ್ರಾಮೀಣಾ ಪ್ರದೇಶ ಬೇರೆಯಲ್ಲ, .ನಮಗೆ ಕರ್ನಾಟಕ ಎಲ್ಲಾ ಒಂದೇ ಎಂದ ಅವರು ನಂತರ ಮಾಧ್ಯಮಗಳು ನನ್ನ ಮೇಲೆ ಸಂಶಯಪಡುವುದು ಬೇಡ. ಏನೇ ಇದ್ದರೂ ನನಗೆ ಸಲಹೆ ಕೊಡಿ. ಆ ಸಲಹೆಯಂತೆಯೇ ನಾನು ನಡೆದುಕೊಳ್ಳುತ್ತೇನೆ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು.
ನಂತರ ವಿಶೇಷವಾದ ಸ್ಥಳೀಯ ಖಾದ್ಯಗಳನ್ನು ಸಿಎಂ ಗದ್ದೆ ಬದಿಯಲ್ಲೇ ರೈತರೊಂದಿಗೆ ಊಟ ಮಾಡಿದ್ದು, ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ನಿರ್ಮಲಾನಂದ ಶ್ರೀಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ರೈತರಿಗೆ ಆಶೀರ್ವಚನ ನೀಡಿದರು.