ಫೇಸ್ಬುಕ್ನಲ್ಲಿ ಸಂದೇಶವನ್ನ ಪೋಸ್ಟ್ ಮಾಡಿದ್ದಕ್ಕೆ ಪಿಎಸ್ಐ ಪತಿ ಕರವೇ ಜಿಲ್ಲಾಧ್ಯಕ್ಷನಿಗೆ ಫೋನ್ ಮಾಡಿ ಧಮ್ಕಿ …

377
FIRSTSUDDI

ಚಿಕ್ಕಮಗಳೂರು- ಪಿಎಸ್ಐ ಪತ್ನಿಯ ಬಗ್ಗೆ ಫೇಸ್ಬುಕ್ನಲ್ಲಿ ಸಂದೇಶವನ್ನ ಪೋಸ್ಟ್ ಮಾಡಿದ್ದಕ್ಕೆ ಪಿಎಸ್ಐ ಪತಿ ಕರವೇ ಜಿಲ್ಲಾಧ್ಯಕ್ಷನಿಗೆ ಫೋನ್ ಮಾಡಿ ಧಮ್ಕಿ ಹಾಕಿರೋ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಟ್ರಾಫಿಕ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಮ್ಯಾ, ಕಾರ್ಯಕ್ರಮವೊಂದರಲ್ಲಿ ಶೂ ಹಾಕಿಕೊಂಡು ದೀಪ ಹಚ್ಚುವ ಮೂಲಕ ಉದ್ಘಾಟಿಸಿದ್ರು.

ಈ ಫೋಟೋಗೆ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ಗೆ ಸಖರಾಯಪಟ್ಟನ ಪಿಎಸ್ಐ ಹಾಗೂ ರಮ್ಯಾಳ ಪತಿ ರಾಘವೇಂದ್ರ ಧಮ್ಕಿ ಹಾಕಿದ್ದಾರೆ. ನೂರುಲ್ಲಾಖಾನ್ಗೆ ಫೋನ್ ಮಾಡಿದ ಪಿಎಸ್ಐ ರಾಘವೇಂದ್ರ, ಮೇಡಂ ಬಗ್ಗೆ ಪೋಸ್ಟ್ ಮಾಡಿರೋದು ನನಗೆ ಸರಿ ಕಾಣಿಸ್ತಿಲ್ಲ. ನಾವು-ನೀವು ಚೆನ್ನಾಗಿರೋದು ಇಷ್ಟ ಇಲ್ವಾ, ಇದೆಲ್ಲಾ ನನಗೆ ಸರಿ ಕಾಣಿಸುವುದಿಲ್ಲ, ನಾನು ಜಾಸ್ತಿ ಮಾತನಾಡುವುದಿಲ್ಲ ಎಂದು ಕಾಲ್ ಕಟ್ ಮಾಡಿದ್ದಾರೆ.