ಮೂಡಿಗೆರೆ : ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪ ಬಲೋನೋ ಹಾಗೂ ಶಿಫ್ಟ್ ಕಾರು ಮುಖಾಮುಖಿ ಡಿಕ್ಕಿಯಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದರು. ಅದೇ ಸಮಯಕ್ಕೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರನ್ನ ಕಾರಿನಿಂದ ಹೊರತಂದು, ಪೊಲೀಸ್ ಹಾಗೂ ಆಂಬುಲೆನ್ಸ್ ಗೆ ಕರೆ ಮಾಡಿ, ಅವರನ್ನ ತನ್ನ ಕಾರಿನಲ್ಲೇ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ಸೇರಿಸಿ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಶಾಸಕ ಸಿ.ಟಿ.ರವಿಯನ್ನ ನೋಡಿದ ಸ್ಥಳಿಯರು ಕೂಡಲೇ ಅವರೊಂದಿಗೆ ಕೈ ಜೋಡಿಸಿ ಯಾವುದೇ ಅನಾಹುತವಾಗದಂತೆ ಅವರನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಒಂದು ಕಾರು ಮಂಗಳೂರು ಕಡೆಯಿಂದ ಮತ್ತೊಂದು ಕಾರು ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಕಾರುಗಳಾಗಿದ್ದು, ಅವರು ಯಾರು, ಎಲ್ಲಿಗೆ ಹೋಗುತ್ತಿದ್ದರು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ, ಸಿ.ಟಿ.ರವಿಯ ಈ ಕಾರ್ಯಕ್ಕೆ ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಜನ ಭೇಷ್ ಅಂದಿದ್ದಾರೆ.