ಚಿಕ್ಕಮಗಳೂರು – ಮಂಗಳೂರು ಬದಲಿ ಮಾರ್ಗವು ಬಂದ್….

1000
firstsuddi

ಕಳಸ- ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಚಿಕ್ಕಮಗಳೂರು, ಮಂಗಳೂರು ಮಾರ್ಗವು ಬಂದ್ ಆಗಿದ್ದು.ಚಾರ್ಮಾಡಿ ರಸ್ತೆ ಬಂದ್ ಆದ ಬಳಿಕ ಕುದುರೆಮುಖ ಮಾರ್ಗವಾಗಿ ಸಂಚರಿಸುತ್ತಿದ್ದು ನೆನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕಳಸ ಸಮೀಪದ ನಲ್ಲಿಬೀಡು ಸೇತುವೆ ಮುಳುಗಡೆಯಾಗಿದ್ದು ಇದು ಸುಮಾರು 150ಅಡಿ ಸೇತುವೆ ಇತಿಹಾಸದಲ್ಲಿ ಮೊದಲ ಬಾರಿಗೆ ಮುಳುಗಡೆಯಾಗಿದ್ದು ಇದರಿಂದ ಕುದುರೆಮುಖ ಮಂಗಳೂರು ಮಾರ್ಗವು ಜಲಾವೃತ ಆಗಿದೆ.ಶೃಂಗೇರಿ –ಎಸ್ ಕೆ ಬಾರ್ಡರ್ ರಸ್ತೆಯಲ್ಲಿ ಎರಡು ಕಡೆ ಮಣ್ಣು ಕುಸಿತಗೊಂಡಿದ್ದು ಭಾರೀ ಗಾತ್ರದ ಮರ ರಸ್ತೆಗೆ ಬಿದ್ದಿದ್ದರಿಂದ ಲಘು ವಾಹನ ಮತ್ತು ಬೈಕ್ ಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜನ ಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿದೆ.