ಚಿಕ್ಕಮಗಳೂರು : ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ನವೆಂಬರ್ ೩೦ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ನ.೩೦ ರಂದು ಮಧ್ಯಾಹ್ನ ೨.೦೦ ಗಂಟೆಗೆ ಎನ್.ಆರ್. ಪುರ ಮೆಣಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಹೆಲಿಪ್ಯಾಡ್‌ಗೆ ಹೆಲಿಕಾಫ್ಟರ್ ನಲ್ಲಿ ಆಗಮಿಸುವರು. ೨.೩೦ ಕ್ಕೆ ಗೌರಿಹಳ್ಳ, ರಾವೂರು ಇಲ್ಲಿ ನರಸಿಂಹರಾಜಪುರದಿಂದ ಹಂದೂರು ಮತ್ತು ಇತರೆ ೫ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಭದ್ರಾ ಹಿನ್ನೀರಿನ ಸೇತುವೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವರು. ಮ.೩.೦೦ ಗಂಟೆಗೆ ನರಸಿಂಹರಾಜಪುರದ ಟಿ.ಬಿ ಸರ್ಕಲ್ ಪಕ್ಕದ ಆವರಣದಲ್ಲಿ ಎನ್.ಆರ್. ಪುರ ಮತ್ತು ಕೊಪ್ಪ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲನ್ಯಾಸ ಮತ್ತು ವಿವಿಧ ಸೌಲಭ್ಯಗಳ ವಿತರಣೆ ಮಾಡುವರು. ಸಂಜೆ ೪.೩೦ ಕ್ಕೆ ಕೊಪ್ಪದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೊಪ್ಪಾದಲ್ಲಿ ವಾಸ್ತವ್ಯ ಮಾಡುವರು. ಡಿಸೆಂಬರ್ ೦೧ ರಂದು ಬೆಳಿಗ್ಗೆ ೯.೩೦ ಕ್ಕೆ ಕೊಪ್ಪಾದ ಹಚ್ಚರಡಿ (ಹಾರನದೂರು) ಹೆಲಿಪ್ಯಾಡ್ ನಿಂದ ಹುಬ್ಬಳ್ಳಿಗೆ ಹೆಲಿಕಾಫ್ಟರ್ ಮೂಲಕ ತೆರಳುವರು.
ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ನ. ೩೦ ರಂದು ಕೊಪ್ಪ ಹಾಗೂ ಎನ್.ಆರ್. ಪುರಕ್ಕೆ ಆಗಮಿಸಿ ಕೊಪ್ಪ ಹಾಗೂ ಎನ್.ಆರ್. ಪುರ ತಾಲ್ಲೂಕುಗಳ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಶಂಕುಸ್ಥಾಪನೆಗೊಳ್ಳಲಿರುವ ಕಾಮಗಾರಿಗಳು ಎನ್.ಆರ್. ಪುರ ಹಂದೂರು ಮತ್ತು ಇತರೆ ೫ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಭದ್ರಾ ಹಿನ್ನೀರಿನ ಸೇತುವೆ ನಿರ್ಮಾಣ ಕಾಮಗಾರಿ ವೆಚ್ಚ ರೂ. ೧೯೬೨ ಲಕ್ಷ.ಬಾಳೆಹೊನ್ನೂರು ಹತ್ತಿರ ಸೇತುವೆ ನಿರ್ಮಾಣ ಕಾಮಗಾರಿ (ಎನ್.ಹೆಚ್.೨೭ ಭದ್ರಾನದಿಗೆ) ವೆಚ್ಚ ೧೨೭೯ ಲಕ್ಷ.ಕೊಪ್ಪದ ಐ.ಟಿ.ಐ ಕಾಲೇಜು ನಿರ್ಮಾಣ ವೆಚ್ಚ ೨೨೯ ಲಕ್ಷ.
ಉದ್ಘಾಟನೆಗೊಳ್ಳಲಿರುವ ಕಾಮಗಾರಿಗಳು ಕೊಪ್ಪ ತಾಲ್ಲೂಕು ಬಾಳಗಡಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ಕಟ್ಟಡ ವೆಚ್ಚ ರೂ. ೨೦೦ ಲಕ್ಷ. ಕೊಪ್ಪ ಮಿನಿ ವಿಧಾನಸೌಧ ಕಟ್ಟಡ ವೆಚ್ಚ ರೂ. ೪೪೦ ಲಕ್ಷ. ಕೊಪ್ಪ ತಾಲ್ಲೂಕು ಮಟ್ಟದ ಆಸ್ಪತ್ರೆಯನ್ನು ೫೦ ರಿಂದ ೧೦೦ ಹಾಸಿಗೆಗಳಿಗೆ ಉನ್ನತೀಕರಿಸಿದ ಕಟ್ಟಡ ವೆಚ್ಚ ರೂ. ೩೧೩ ಲಕ್ಷ. ಕಮ್ಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರ ನೂತನ ಕಟ್ಟಡ ವೆಚ್ಚ ರೂ. ೧೨೪ ಲಕ್ಷ. ಎನ್.ಆರ್. ಪುರ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಮತ್ತು ಐ.ಸಿ.ಯು ಘಟಕ ಕಟ್ಟಡ ವೆಚ್ಚ ೬೫ ಲಕ್ಷ. ೨.೫೦ ಲಕ್ಷ ಸಾಮರ್ಥ್ಯದ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಮತ್ತು ನೆಲ ಮಟ್ಟದ ಜಲ ಸಂಗ್ರಹಗಾರ ಕಾಮಗಾರಿ ವೆಚ್ಚ ರೂ. ೫೨ ಲಕ್ಷ. ಕೊಪ್ಪ ಪಶು ಆಸ್ಪತ್ರೆ ಕಟ್ಟಡ ವೆಚ್ಚ ೨೫ ಲಕ್ಷ ಸೇರಿದಂತೆ ಒಟ್ಟು ೪,೬೮೯ ಲಕ್ಷಗಳ ಕಾಮಗಾರಿಗಳಿಗೆ ಮುಖ್ಯ ಮಂತ್ರಿಗಳು ಚಾಲನೆ ನೀಡುವರು.