ಮೈಸೂರು: ವರುಣಾದಲ್ಲಿ ತಮ್ಮ ಮಗ ಡಾ. ಯತೀಂದ್ರ ಪರ ಪ್ರಚಾರ ಮಾಡ್ತಿರೋ ಸಿಎಂ ಸಿದ್ದರಾಮಯ್ಯ ಭಾವುಕರಾದ್ರು. ನನ್ನ ಮಗ ರಾಕೇಶ್ ನೆನೆಪಾಗ್ತಿದ್ದಾನೆ. ಅವನಿದ್ದಿದ್ರೆ ಪ್ರಚಾರಕ್ಕೆ ಬರ್ತಿರಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರವನ್ನು ಅವನೇ ನೋಡಿಕೊಳ್ಳುತ್ತಿದ್ದ. ಆದ್ರೆ ಮನುಷ್ಯ ಹುಟ್ಟಿದ ಮೇಲೆ ಸಾಯಲೇಬೇಕು. ಅವನು ಕಾಯಿಲೆ ಇತ್ತು, ಸತ್ತು ಹೋದ ಅಂತ ಮಗನನ್ನು ನೆನೆಪಿಸಿಕೊಂಡು ಕಣ್ಣೀರು ಹಾಕಿದ್ರು.ನಾನು ವರುಣಾದಲ್ಲಿ 30 ಸಾವಿರ ವೋಟುಗಳ ಅಂತರದಿಂದ ಗೆದ್ದಿದ್ದೇನೆ. ಅದಕ್ಕಿಂತ ಹೆಚ್ಚು ಮತಗಳಿಂದ ಯತೀಂದ್ರ ಗೆಲ್ತಾನೆ ಅಂತ ಮುಖ್ಯಮಂತ್ರಿ ಭಾವುಕ ಭಾಷಣ ಮಾಡಿದ್ರು.ಮಣ್ಣಿನ ಮಗನಿಗೆ ಮತ ಹಾಕ್ತಿರೋ? ಅವನ್ಯಾರಿಗೋ ಮತ ಹಾಕ್ತೀರಾ? ಅವನಿಗೂ ಕ್ಷೇತ್ರಕ್ಕೂ ಸಂಬಂಧ ಏನು? ಅವರ ಮಗ, ಇವರ ಮಗ ಅಂದವ್ರಿಗೆ ಮತ ಹಾಕ್ತೀರಾ? ವರುಣಾ ಮತ್ತು ಚಾಮುಂಡೇಶ್ವರಿ ನನ್ನ ಕಣ್ಣು ಅಂತ ಸಿದ್ದರಾಮಯ್ಯ ಯಡಿಯೂರಪ್ಪರ ಕಿರಿಯ ಮಗ ವಿಜಯೇಂದ್ರ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ರು.