ಹಾಸನ : ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಯೋಜನೆಗಳಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಹಂತವಾರು ಪರಿಶೀಲಿಸಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಂದೂವರೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯಲ್ಲಿ ಮಾತನಾಡಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ರಸ್ತೆ, ಚರಂಡಿ ಕಾಮಗಾರಿಗಳನ್ನು ನಿರ್ವಹಿಸಲು ಮಳೆಯಾಗುತ್ತಿರುವುದರಿಂದ ಕಷ್ಟಕರವೆಂದು ಕೆಲವು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದು, ಈಗಾಗಲೇ ಮಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೂಡಲೇ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರ ಸ್ಥಳೀಯ ಸಂಸ್ಥೆಯ ಜಿಲ್ಲಾವಾರು ತೆರಿಗೆ ಸೂಚ್ಯಂಕದಲ್ಲಿ ಮನೆ ಕಂದಾಯ ಶೇಕಡಾ 48.59 ನೀರಿನ ತೆರಿಗೆ ಶೇಕಡಾವಾರು 42.30, ಮಳಿಗೆ ಕಟ್ಟಡಗಳ ತೆರಿಗೆಗಳನ್ನು ಶೇಕಡಾವಾರು 44.00 ರಷ್ಟು ಪ್ರಗತಿ ಸಾಧಿಸಿದ್ದು, ಆದಷ್ಟು ಬೇಗ ಶೇ 100 ರಷ್ಟು ಪ್ರಗತಿ ಸಾಧಿಸಲು ಜಿಲ್ಲಾಧಿಕಾರಿ ಅವರು ಸೂಚಿಸಿದರು.
2017-18 ನೇ ಸಾಲಿನ ರಾಜ್ಯ ಹಣಕಾಸು ನಿಧಿಯ ಕಾಮಗಾರಿ ಪ್ರಗತಿಯಲ್ಲಿ ಶೇಕಡಾ 22{530ccd75e2fcec17e1c04cab1dd604116093241ff584d1c1efdf19a8030d127f} ರಷ್ಟು ಪ್ರಗತಿ ಸಾಧಿಸಿದೆ. ರಾಜ್ಯ ಹಣಕಾಸು ಕುಡಿಯುವ ನೀರಿನ ಅನುದಾನದಲ್ಲಿ ಕಾಮಗಾರಿಗಳ ಪ್ರಗತಿಯಲ್ಲಿ 56.58 {530ccd75e2fcec17e1c04cab1dd604116093241ff584d1c1efdf19a8030d127f} ಸಾಧಿಸಿದೆ. 14 ನೇ ಹಣಕಾಸು ನಿಧಿ(ಸಾಮಾನ್ಯ ನಿಧಿ)ಯಲ್ಲಿ ಶೇ 6 {530ccd75e2fcec17e1c04cab1dd604116093241ff584d1c1efdf19a8030d127f} ರಷ್ಟು ಪ್ರಗತಿ ಸಾಧಿಸಿದ್ದು ಜಿಲ್ಲಾಧಿಕಾರಿ ಅವರು ನಿಗಧಿತ ಕಾಲದಲ್ಲಿ ಅನುದಾನವನ್ನು ಬಳಕೆ ಮಾಡಿ ಶೇ 100 ರಷ್ಟು ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
14 ನೇ ಪೋತ್ಸಾಹಕ ನಿಧಿಯ ಪ್ರಗತಿಯಲ್ಲಿರುವ ಕಾಮಗಾರಿಗಳ ಶೇಕಡಾ ಪ್ರಮಾಣ 2.62{530ccd75e2fcec17e1c04cab1dd604116093241ff584d1c1efdf19a8030d127f} ಇದ್ದು ಪರಿಶೀಲಿಸಿದ ಜಿಲ್ಲಾಧಿಕಾರಿ ಅವರು ನಿಗಧಿತ ಕಾಲದಲ್ಲಿ ಕಾಮಗಾರಿಗಳನ್ನು ಕೈಕೊಂಡು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಗರೋತ್ಥಾನ 3 ನೇ ಹಂತದ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆಯುವಂತೆ ಹಾಗೂ ಸರ್ಕಾರದ ಯೋಜನೆಯ ಎಲ್ಲಾ ಅನುದಾನವನ್ನು ನಿಗಧಿತ ಕಾಲದಲ್ಲಿ ಬಳಕೆ ಮಾಡಿ ಶೇ 100 ರಷ್ಟು ಪ್ರಗತಿ ಸಾಧಿಸಲು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ಸೂಚಿಸಿದರು.
ನವೆಂಬರ್ 15 ರಂದು ಮುಂದಿನ ಸಭೆಯನ್ನು ನಿಗಧಿ ಪಡಿಸುತ್ತಾ ನಗರ ಸ್ಥಳೀಯ ಸಂಸ್ಥೆಗಳು ವಿವಿಧ ಯೋಜನೆಯಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ, ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ವೆಚ್ಚ ಪಾವತಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರು ತಿಳಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರಾದ ಶಿವಾನಂದ್, ನಗರಸಭೆ ಆಯುಕ್ತರಾದ ಪರಮೇಶ್, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಭೆಯಲ್ಲಿ ಹಾಜರಿದ್ದರು.