ಮಲೆನಾಡು ಭಾಗದ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜನವಸತಿ ಪ್ರದೇಶದಲ್ಲಿ ಬಿಟ್ಟು-ಬಿಟ್ಟು ಮಳೆಯಾಗ್ತಿದೆ. ಜಿಲ್ಲೆಯ ಕೊಪ್ಪ, ಎನ್.ಆರ್.ಪುರದಲ್ಲಿ ಸಾಧಾರಣ ಮಳೆಯಾಗ್ತಿದ್ದು, ಮೂಡಿಗೆರೆ ಹಾಗೂ ಶೃಂಗೇರಿಯ ಕೆಲ ಭಾಗದಲ್ಲಿ ಜೋರು ಮಳೆಯಾಗ್ತಿದ್ದು, ಕುದುರೆಮುಖ, ಕಳಸ, ಕೆರೆಕಟ್ಟೆ, ಕಿಗ್ಗಾದಲ್ಲಿ ಭಾರೀ ಮಳೆಯಾಗ್ತಿದ್ದು.ಈಗಾಗ್ಲೇ ಈ ಭಾಗದಲ್ಲಿ ಕಳೆದೆರಡು ತಿಂಗಳಿಂದ ನಿರಂತರವಾಗಿ ಸುರಿದ ಮಳೆಗೆ ಜನ ಕಂಗಾಲಾಗಿದ್ರು. ಬೆಳೆಗಳು ನೀರು ಪಾಲಾಗಿದ್ವು. ಆದ್ರೀಗ, ಮಳೆ ಪ್ರಮಾಣ ಕಡಿಮೆಯಾದ್ರು ಭೂಕುಸಿತ, ಗುಡ್ಡ ಕುಸಿತದ ಪ್ರಕರಣಗಳಿಂದ ಜನ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಮಲೆನಾಡಲ್ಲಿ ಮಳೆ ಪ್ರಮಾಣ ಕುಂಠಿತಗೊಂಡಿದ್ರು ಗಾಳಿಯ ಅಬ್ಬರ ಜೋರಾಗಿರೋದ್ರಿಂದ ವಿದ್ಯುತ್ ಕಂಬ, ಮರಗಳು ಕೂಡ ಧರೆಗುರುಳುತ್ತಿದ್ದು ಮಲೆನಾಡಿನ ಜನ ಕತ್ತಲಲ್ಲಿ ಬದುಕೋದ್ರ ಜೊತೆ, ಹೊರಬಂದೋರು ಗ್ರಾಮಕ್ಕೆ ತೆರಳಲಾಗದೆ ಕಂಗಾಲಾಗಿದ್ದಾರೆ.