ಕೊಡಗು: ಪ್ರವಾಹ ಪೀಡಿತ ಕೊಡಗಿಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದು, ಸೋಮವಾರಪೇಟೆ ತಾಲೂಕಿನ ಮಾದಪುರದಲ್ಲಿ ಅಪಾರ ಹಾನಿ ಪ್ರದೇಶಗಳನ್ನು ವೀಕ್ಷಿಸಿದ್ದು , ಮಡಿಕೇರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತಸ್ಥರಿಗೆ ಭರವಸೆ ನೀಡಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿಗಳ ವರದಿಯನ್ನು ಕೇಂದ್ರಕ್ಕೆ ಅವರು ನೀಡಲಿದ್ದು, ಇದರಿಂದ ಕೊಡಗಿಗೆ ಕೇಂದ್ರದಿಂದ ಸಹಾಯ ಸಿಗುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಎಸ್ ಪಿ ಸುಮನ್ ಸೂಚನೆ ಮೇರೆಗೆ ಮದಾಪುರ ಹಾನಿ ಪ್ರದೇಶ ಚಿತ್ರಿಕರಣ ಮಾಡದಂತೆ ಪೋಲಿಸರು ಮಾಧ್ಯಮದವರನ್ನು ತಡೆದಿದ್ದರು.ನಿರ್ಮಲಾ ಸೀತರಾಮನ್ ಅವರೊಂದಿಗೆ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.