ಕೋಲಾರಕ್ಕೆ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಜಿ. ಸತ್ಯವತಿಯವರಿಗೆ ಬೀಳ್ಕೊಡುಗೆ ಸಮಾರಂಭ

828

ಚಿಕ್ಕಮಗಳೂರು :  ಜಿಲ್ಲಾಧಿಕಾರಿ, ಪ್ರಭಾರ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಸತ್ಯವತಿಯವರಿಗೆ ಜಿ.ಪಂ ಸಭಾಂಗಣದಲ್ಲಿ ಬೀಳ್ಕೊಡಿಗೆ ಹಮ್ಮಿಕೊಳ್ಳಲಾಗಿತ್ತು. ಬೀಳ್ಕೊಡಿಗೆ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ಕೊನೆಯ ತನಕ ನಮ್ಮ ಪ್ರಯತ್ನವನ್ನು ಪಟ್ಟಲ್ಲಿ ಸರಿಯಾದ ಫಲ ಸಿಕ್ಕೆ ಸಿಗುತ್ತದೆ. ನನ್ನ ಒಂದು ವರ್ಷದ ಆಡಳಿತಾವಧಿಯಲ್ಲಿ ಬರಗಾಲದ ಸಮಸ್ಯೆಯನ್ನು ಬಹಳಷ್ಟು ಎದುರಿಸಿದ್ದು, ೫೬ ಜನ ರೈತರು ಸಾವನ್ನಪ್ಪಿದರು ಇದು ಬಹಳಷ್ಟು ದುಖಃದ ವಿಷಯವಾಗಿದೆ. ರೈತರಿಗೆ ಬೆಳೆ ಪರಿಹಾರ ನೀಡುವುದು ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಬಹಳಷ್ಟು ಎದುರಿಸಬೇಕಾಯಿತು.

ಕಡೂರಿನಲ್ಲಿ ಒಂದೇ ವಾರದಲ್ಲಿ ಮೂರು ಜನ ರೈತರು ಆತ್ಮಹತ್ಯೆ ಮಾಡಿಕೊಂಡರು ಇದು ಬಹಳಷ್ಟು ವಿಷಾಧಕರವಾದ ವಿಷಯ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಅಧಿಕಾರ ಸರಿಯಾಗಬೇಕಾದರೆ ತಂತ್ರಜ್ಙಾನದ ಬಳಕೆ ಹೆಚ್ಚಾಗಬೇಕು ನಾವು ಮಾಡುವ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ಅದಕ್ಕೆ ಫಲ ಸಿಗುತ್ತದೆ. ನಮ್ಮ ಅಧಿಕಾರಕ್ಕೆ ತಕ್ಕ ಕೆಲಸವನ್ನು ನಾವು ಮಾಡಬೇಕು ಮನಸ್ಸಿದ್ದಲ್ಲಿ ನಮ್ಮ ಕಾರ್ಯ ಆಗುತ್ತದೆ ಎಂದು ತಿಳಿಸಿದರು.

ಜಿ.ಪಂ. ಉಪಾಧ್ಯಕ್ಷ ರಾಮಸ್ವಾಮಿ ಅನಿಸಿಕೆ ವ್ಯಕ್ತಪಡಿಸುತ್ತಾ ವೃತ್ತಿ ಆಕಸ್ಮಿಕ, ವರ್ಗಾವಣೆ ಮತ್ತು ನಿವೃತ್ತಿ ಅನಿವಾರ್ಯ. ಮಗು ಹುಟ್ಟುವಾಗ ಉಸಿರು ಇರುತ್ತದೆ. ವ್ಯಕ್ತಿಯು ಹೋದಾಗ ಹೆಸರು  ಇರುತ್ತದೆ ಈ ಮಾತು ಸತ್ಯವತಿಯವರಿಗೆ ಅನ್ವಯಿಸುತ್ತದೆ ಎಂದರು. ಒಬ್ಬ ಜಿಲ್ಲಾಧಿಕಾರಿಯು ಕನಿಷ್ಟ ೨-೩ ವರ್ಷಗಳ ಕಾಲ ಕೆಲಸ ಮಾಡಿದರೆ ಜಿಲ್ಲೆಯ ಸಮಸ್ಯೆ ಬಗೆಹರಿಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಜಿ.ಪಂ ಸದಸ್ಯ ಮಹೇಶ್ ಒಡೆಯರ್, ತಾ.ಪಂ ಅಧ್ಯಕ್ಷ ಈ.ಆರ್ ಮಹೇಶ್ ಮಾತನಾಡಿದರು. ಜಿ.ಪಂ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here