ಫಸ್ಟ್ ಸುದ್ದಿ: ಸೈರನ್ ಹಾಕಿಕೊಂಡು, ಎಷ್ಟೇ ಹಾರನ್ ಮಾಡಿದ್ರು ಆಂಬುಲೆನ್ಸ್ ಗೆ ದಾರಿ ಬಿಡದೆ ಅಮಾನವೀಯತೆ ಮೆರೆದ ಘಟನೆ ಮಂಗಳೂರಿನ ಬಿ.ಸಿ.ರೋಡ್ನಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಹೆಚ್ಚಿನ ಚಿಕಿತ್ಸೆಗೆ ತುಂಬಾ ಸಿರಿಯಸ್ ಆಗಿದ್ದ 45 ವರ್ಷದ ಅಮಿರ್ ಜಾನ್ ಎಂಬುವರನ್ನ ಚಿಕ್ಕಮಗಳೂರಿನಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು. ಈ ವೇಳೆ, ಮಂಗಳೂರು ಸಮೀಪಿಸುತ್ತಿದ್ದಂತೆ KA19AC2847 ಮಂಗಳೂರು ನೋಂದಣಿಯ ಕಾರು ಚಾಲಕನೊಬ್ಬ ಸುಮಾರು 10 ಕಿ.ಮೀ. ಆಂಬುಲೆನ್ಸ್ ಗೆ ದಾರಿ ಬಿಡದೆ ಸತಾಯಿಸಿದ್ದಾನೆ. ಆಂಬುಲೆನ್ಸ್ ನ ಸೈರನ್ ಕೇಳಿ ನೂರಾರು ವಾಹನಗಳು ದಾರಿ ಬಿಟ್ರು ಇದೊಂದು ಕಾರು ಮಾತ್ರ ದಾರಿ ಬಿಟ್ಟಿಲ್ಲ. ಗಾಡಿಯಲ್ಲಿ ಸಿರಿಯಸ್ ಪೇಶೆಂಟ್ ಇದ್ರು ಆಂಬುಲೆನ್ಸ್ ಚಾಲಕ ಬಿ.ಸಿ.ರೋಡ್ನಿಂದ ಐದು ಕಿ.ಮೀ. ಹಿಂದೆ ನಿಂತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ರು ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಂಬುಲೆನ್ಸ್ ಚಾಲಕ ಮಂಗಳೂರು ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿದ್ದಾನೆ.