“ಪರಿಸರ ಸಂರಕ್ಷಣೆ, ಜೀವಕುಲದ ರಕ್ಷಣೆ” ಸಿಸ್ಟರ್ ಕಮೇಲ್

865
firstsuddi

ಮೂಡಿಗೆರೆ- ವಿಶ್ವಪರಿಸರ ದಿನಾಚರಣೆಯನ್ನು ನಜ್ರತ್ ಶಾಲೆ ಬಣಕಲ್‍ನಲ್ಲಿ ಆಚರಿಸಲಾಯಿತು. ಸಿಸ್ಟರ್ ಬ್ಲಾಂಚ್ ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಸ್ಟರ್ ಕಮೇಲ್ ಹಾಗೂ ಸಿಸ್ಟರ್ ಆಲೀಸ್‍ರವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಸ್ಟರ್ ಕಮೇಲ್ ಇದು ಒಂದು ಅರ್ಥಪೂರ್ಣ ದಿನಾಚರಣೆ ಪ್ಲಾಸ್ಟಿಕ್‍ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದರು.
ಶಾಲಾ ಮಕ್ಕಳು ತಂದಿದ್ದ ನೂರಾರು ಫಲಪುಷ್ಪಗಳ ಸಸ್ಯಗಳನ್ನು ಶಿಕ್ಷಕರ ಮೂಲಕ ಶಾಲೆಗೆ ಹಸ್ತಾಂತರಿಸಿ ಶಾಲಾ ಆವರಣದಲ್ಲಿ ನಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಯಾದ ಸೋಹನ್ ನಿರೂಪಣೆ ಮಾಡಿದ್ದು, ಶಿಕ್ಷಕಿಯರಾದ ವನಿತ, ರೇಖಾ, ಸಿಸ್ಟರ್ ಸ್ಟೆಲ್ಲಾ ಉಪಸ್ಥಿತರಿದ್ದರು.