ರೈತರೇ ಡಿ.ಸಿ.ಸಿ ಬ್ಯಾಂಕಿನ ಜೀವಾಳ -ಎಸ್.ಎಲ್.ಧರ್ಮೇ ಗೌಡ …

416
firstsuddi

ಚಿಕ್ಕಮಗಳೂರು- ರೈತರೇ ಡಿ.ಸಿ.ಸಿ ಬ್ಯಾಂಕಿನ ಜೀವಾಳ ಎಂಬುವುದನ್ನು ಬ್ಯಾಂಕ್ ಸಿಬ್ಬಂದಿಗಳು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಶಾಸಕ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ತಿಳಿಸಿದ್ದಾರೆ.ಅವರು ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 41 ಜನ ಗುಮಾ ಸ್ತರುಗಳು ಹಾಗೂ ಮೇಲ್ವಿಚಾರಕ ರುಗಳಿಗೆ ವ್ಯವಸ್ಥಾಪಕರ ಹುದ್ದೆಗೆ ನೀಡಿರುವ ಬಡ್ತಿ ಆದೇಶದ ಪ್ರತಿಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ರೈತರೇ ಸಹಕಾರಿ ಸಂಸ್ಥೆಗಳ ಜೀವಾಳ. ಅವರೊಂದಿಗೆ ಸೌಜ ನ್ಯದಿಂದ ಹಾಗೂ ಗೌರವಯುತ ವಾಗಿ ವರ್ತಿಸಿ ಅವರ ಪ್ರೀತಿ ಪಾತ್ರಕ್ಕೆ ಒಳಗಾಗುವುದರ ಮೂಲಕ ಬ್ಯಾಂಕಿನ ಸಿಬ್ಬಂದಿ ಬ್ಯಾಂಕಿನ ಅಭಿವೃದ್ಧಿಗೆ ದುಡಿಯ ಬೇಕೆಂದರು ಬಡ್ತಿ ಹೊಂದಿರುವ ಸಿಬ್ಬಂದಿ ವರ್ಗದವರು ಕಿರಿಯ ಸಿಬ್ಬಂದಿಗಳಿಗೆ ಮಾದರಿಯಾಗುವಂತೆ ನಡೆದುಕೊಳ್ಳ ಬೇಕು. ಬ್ಯಾಂಕ್ ಪ್ರಗತಿಗೆ ಹೆಚ್ಚು ಶಾಖೆಗಳು ಹೆಚ್ಚು ಸಕ್ರಿಯವಾಗಿ ಶಿಸ್ತಿನಿಂದ ಕಾರ್ಯ ನಿರ್ವಹಿಸ ಬೇಕೆಂದರು.ಬ್ಯಾಂಕಿಂಗ್ ಕ್ಷೇತ್ರ ಈಗ ಹೆಚ್ಚು ಸ್ಪರ್ಧಾತ್ಮಕವಾಗಿದ್ದು, ವಾಣಿಜ್ಯ ಬ್ಯಾಂಕ್‍ಗಳೊಂದಿಗೆ ಸ್ಪರ್ಧಿಸಿ ಪ್ರಗತಿ ಹೊಂದಲು ಸಿಬ್ಬಂದಿಯ ಕಠಿಣ ಪ್ರಯತ್ನ ಅನಿವಾರ್ಯವಾಗಿದೆ. ಡಿ.ಸಿ.ಸಿ. ಬ್ಯಾಂಕ್ ಜಿಲ್ಲೆಯ ವಿವಿಧ ಕಡೆಗಳಲ್ಲಿ ನೂತನ ಶಾಖೆಗಳನ್ನು ಪ್ರಾರಂಭಿಸಿದ್ದು,ಶಾಖೆಗಳ ಮೂಲಕ ವ್ಯವಹಾರಗಳನ್ನು ಹೆಚ್ಚಿಸಿ ಬ್ಯಾಂಕ್ ಮತ್ತಷ್ಟು ಜನಪ್ರಿಯಗೊಳಿಸ ಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಸಿಬ್ಬಂದಿ ಸೂಕ್ತ ಸಲಹೆ ಅಭಿಪ್ರಾಯಗಳನ್ನು ನೀಡಬೇಕು ಎಂದರು.ಇದೇ ಸಂದರ್ಭದಲ್ಲಿ ಮಾತ ನಾಡಿದ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಲಿಂಗಣ್ಣಯ್ಯ ರವರು, ಶಾಸಕರೂ ಆದ ಧರ್ಮೇಗೌಡರ ಅವಧಿಯಲ್ಲಿ ಬ್ಯಾಂಕ್ ನಬಾರ್ಡ್ ನಿಂದ ಎ ಗ್ರೇಡ್ ಪಡೆದಿದೆ ಹಾಗೂ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದು ತಿಳಿಸಿದರು.ಬ್ಯಾಂಕಿನ ಇತಿಹಾಸದಲ್ಲಿ ಇದೇ ಪ್ರಪ್ರಥಮವಾಗಿ ಬ್ಯಾಂಕಿನ ದುಡಿಯುವ ಕೈಗಳಿಗೆ ಹೆಚ್ಚು ಪ್ರೋತ್ಸಾಹ ದೊರಕಿದೆ. 41 ಸಿಬ್ಬಂದಿಗಳಿಗೆ ಬಡ್ತಿ ನೀಡಿ ಆದೇ ಶಿಸಿರುವುದು ಎಲ್ಲರಿಗೂ ಖುಷಿ ತಂದಿದೆ.
ಬೀರೂರಿನಲ್ಲಿ ಬ್ಯಾಂಕಿನ ನೂತನ ಶಾಖೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರವರಿಂದ ಹಾಗೂ ಸಿಂಗಟಗೆರೆ ಶಾಖೆಯನ್ನು ಅಂದಿನ ಗೃಹ ಸಚಿವರಾಗಿದ್ದ ಡಾ.ಪರಮೇಶ್ವರ್ ರವರಿಂದ ಉದ್ಘಾಟಿಸಿ ಬ್ಯಾಂಕಿನ ಅಧ್ಯಕ್ಷರಾದ ಎಸ್.ಎಲ್. ಧರ್ಮೇಗೌಡರು ಇತಿಹಾಸ ನಿರ್ಮಿಸಿದ್ದಾರೆ.ಬ್ಯಾಂಕಿನ ಸರ್ವತೋಮುಖ ಪ್ರಗತಿಗೆ ಹೆಚ್ಚು ಆಸಕ್ತಿ ಹೊಂದಿ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಅಧ್ಯಕ್ಷರು,ಆಡಳಿತ ಮಂಡಳಿಯೊಂದಿಗೆ ಎಲ್ಲಾ ನೌಕರರು ಕೈ ಜೋಡಿಸಿ ಬ್ಯಾಂಕ್ ಮತ್ತಷ್ಟು ಪ್ರಗತಿ ಹೊಂದುವಂತೆ ಮಾಡಬೇಕೆಂದು ಅವರು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಎಸ್. ಎಲ್.ಧರ್ಮೇಗೌಡರವರನ್ನು ಸಿಬ್ಬಂದಿ ಅಭಿನಂದಿಸಿದರು