ಆಂಧ್ರಪ್ರದೇಶ: ಚಿತ್ತೂರು ಜಿಲ್ಲೆಯ ಗಂಗಧರನೆಲ್ಲೂರು ಗ್ರಾಮದಲ್ಲಿ ತಂದೆಯೇ ಮೂವರು ಮಕ್ಕಳನ್ನು ನದಿಗೆ ಎಸೆದಿರುವ ಘಟನೆ ನಡೆದಿದ್ದು,ವೆಂಕಟೇಶ್ ಎಂಬಾತನ ಪತ್ನಿ ಅಮರಾವತಿ ಪತಿಯೊಂದಿಗೆ ಜಗಳವಾಡಿ ತವರು ಮನೆಗೆ ತೆರಳಿದ್ದು, ವೆಂಕಟೇಶ್ ಪತ್ನಿಯ ತವರು ಮನೆಗೆ ತೆರಳಿ ಮಕ್ಕಳನ್ನು ಊರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ,ಬಳಿಕ ಹೆಂಡತಿ ಮೇಲಿನ ಸಿಟ್ಟಿಗೆ ಮಕ್ಕಳಾದ ಪುನೀತ್(6),ಸಂಜಯ್(3),ಹಾಗೂ 10 ತಿಂಗಳ ಹಸುಗೂಸನ್ನು ನದಿಗೆ ಎಸೆದು ಪರಾರಿಯಾಗಿದ್ದಾನೆ.ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಹುಡುಕುತ್ತಿದ್ದಾರೆ.