ಭಾನುವಾರ ನಡೆಯಬೇಕಿದ್ದ ಎಫ್ ಡಿ ಸಿ ಪರೀಕ್ಷೆ ಮುಂದಕ್ಕೆ

353

ಬೆಂಗಳೂರು : ಫೆಬ್ರವರಿ 4ರ ಭಾನುವಾರ ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದ ಎಫ್ ಡಿ ಸಿ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಭಾನುವಾರ ಬೆಳಗ್ಗೆ 10 ಗಂಟೆ ಮತ್ತು ಮಧ್ಯಾಹ್ನ 2ಕ್ಕೆ ನಿಗದಿಯಾಗಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗಳ ದಿನಾಂಕ ಬದಲಾಗಿದೆ. ಈ ಬಗ್ಗೆ ಕೆಪಿಎಸ್ಸಿ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪರೀಕ್ಷೆಗಳನ್ನ ಮುಂದೂಡಿರುವ ಬಗ್ಗೆ ಸತ್ತೋಲೆ ಹೊರಡಿಸಿದೆ.
ಪರೀಕ್ಷೆಗಳನ್ನ ಮುಂದೂಡಿರೋ ಬಗ್ಗೆ ಆದೇಶ ಹೊರಡಿಸಿರೋ ಕೆಪಿಎಸ್ಸಿ, ಹೊಸ ದಿನಾಂಕವನ್ನ ಸದ್ಯದಲ್ಲೇ ಪ್ರಕಟಿಸೋದಾಗಿ ಹೇಳಿದೆ. ಫೆ. 4ರ ಭಾನುವಾರ ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಕಾರ್ಯಕ್ರಮವಿದ್ದು, ಪ್ರಧಾನಿ ಮೋದಿ ಬರುತ್ತಿದ್ದಾರೆ. ಮೋದಿ ಆಗಮನ ಹಿನ್ನೆಲೆ, ಮಹದಾಯಿಗಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಗಳೂರು ಬಂದ್ಗೆ ಕರೆ ನೀಡಿದ್ದಾರೆ. ಒಂದು ವೇಳೆ ಬಂದ್ ನಡೆದರೆ, ಪರೀಕ್ಷಾರ್ಥಿಗಳಿಗೆ ತೊಂದರೆ ಯಾಗಬಹುದೆಂಬ ಮುನ್ನೆಚ್ಚರಿಕೆಯಿಂದ ಪರೀಕ್ಷೆಯನ್ನ ಮುಂದೂಡಲಾಗಿದೆ.