ಕರ್ನಾಟಕದ ರಾಗಿ ಮುದ್ದೆಗೆ ಫಿದಾ ಆದ ಬ್ರಿಟಿಷ್ ಪ್ರಜೆ…!

623

ಚಾಮರಾಜನಗರ : ಮಹಾತ್ಮಾ ಗಾಂಧಿಯಿಂದ ಪ್ರೇರಣೆಗೊಂಡ ಬ್ರಿಟೀಸ್ ಪ್ರಜೆಯೊಬ್ಬರು ಕಾಲ್ನಡಿಗೆಯಲ್ಲಿಯೇ ಇಡೀ ಭಾರತವನ್ನು ನೋಡಬೇಕೆಂಬ ಆಸೆಯಿಂದ ಪಯಣ ಆರಂಭಿಸಿದ್ದು, ಸದ್ಯ ಚಾಮರಾಜನಗರಕ್ಕೆ ಆಗಮಿಸಿದ್ದಾರೆ.
ಬ್ರಿಟಿಷ್ ಪ್ರಜೆ ಒಲೆವರ್ ಜೇಮ್ಸ್ ಹಂಟರ್ ಸ್ಮಾರ್ಟ್ ಕಾಶ್ಮೀರ ದಿಂದ ಏಪ್ರಿಲ್ 24 ರಂದು ಪಯಣ ಆರಂಭಿಸಿದ್ದಾರೆ. ಈಗಾಗಲೇ 5080 ಕಿ.ಮೀ ಕ್ರಮಿಸಿರುವ ಒಲೆವರ್ ಅವರು ಕರ್ನಾಟಕದ ನೆಚ್ಚಿನ ಖಾದ್ಯವಾಗಿರುವ ರಾಗಿ ಮುದ್ದೆ ಒಲೆವರ್ ಅವರ ಅಚ್ಚುಮೆಚ್ಚಿನ ತಿನಿಸು. ಈ ತಿನಿಸಿನಲ್ಲಿ ಏನೋ ಸೊಗಡಿದೆ. ವಿಶಿಷ್ಟವಾದ ಸ್ವಾದವಿದೆ ಎಂದು ಹೇಳುತ್ತಾರೆ.
ಒಲೆವರ್ ಅವರು ಪ್ರತಿದಿನ 35 ಕಿ.ಮೀ ಪಯಣಿಸುತ್ತಾರೆ ಹಾದಿಯಲ್ಲಿ ಸಿಗುವ ಎಲ್ಲ ಸುಂದರ ತಾಣಗಳನ್ನು ಸಂದರ್ಶಿಸುತ್ತ ಸಾಗುತ್ತಾರೆ. ಇಂಗ್ಲೆಂಡ್ ನಲ್ಲಿ ಬಿಎಸ್ಸ್ ಜಿಯಾಗ್ರಫಿ ಅಧ್ಯಯನ ಮಾಡಿದ್ದು, ಭಾರತದ ಜನಜೀವನ, ನೈಸರ್ಗಿಕ ಸೌಂದರ್ಯ, ವೈವಿಧ್ಯಮಯ ಸಂಸ್ಕೃತಿ, ರಾಜ್ಯ ರಾಜ್ಯಗಳಲ್ಲೂ ಇರುವ ಭಾಷೆಯ ವೈಶಿಷ್ಟ್ಯವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here