ಮೂಡಿಗೆರೆ ವೆಲ್ಫೇರ್ ಅಸೋಸಿಯೇಶನ್‍ನಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭ

824

ಮೂಡಿಗೆರೆ : ಕಳೆದ ಏಳು ವರ್ಷಗಳಿಂದ ಜಾತಿ-ಧರ್ಮ-ಬಡವ ಯಾವುದನ್ನೂ ಲೆಕ್ಕಿಸದೆ ಬಡವರ ಸೇವೆ ಮಾಡ್ತಿರೋ ಮೂಡಿಗೆರೆ ವೆಲ್ಫೇರ್ ಅಸೋಸಿಯೇಶನ್ ಇದೀಗ ಮತ್ತೊಂದು ಮೈಲಿಗಲ್ಲು ಸೃಷ್ಠಿಸಿದೆ. ಬಡವರ ಅನುಕೂಲಕ್ಕಾಗಿ ಜಿಲ್ಲೆಗೆ ಮೊದಲ ಬಾರಿಗೆ ವೆಂಟಿಲೇಟರ್ ಆಂಬುಲೆನ್ಸ್‍ನ ಕೊಡುಗೆಯಾಗಿ ನೀಡುತ್ತಿದ್ದಾರೆ. ಈ ವೆಂಟಿಲೇಟರ್ ಆಂಬುಲೆನ್ಸ್ ಬೆಲೆ ಬರೋಬ್ಬರಿ 23 ಲಕ್ಷ. ಇದರಿಂದ ಮೂಡಿಗೆರೆ ಸಾವಿರಾರು ಜನರಿಗೆ ಅನುಕೂಲವಾಗಲಿದ್ದು, ನಾಳೆ ಬೆಳಗ್ಗೆ ಎಸ್ಪಿ ಅಣ್ಣಾಮಲೈ ಈ ಆಂಬುಲೆನ್ಸ್‍ನ ಉದ್ಘಾಟನೆ ಮಾಡಲಿದ್ದಾರೆ.

ದೇಶಾದ್ಯಂತ ಹಿಂದು-ಮುಸ್ಲಿಮರ ಧರ್ಮಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಮೂಡಿಗೆರೆ ವೆಲ್ಫೇರ್ ಅಸೋಸಿಯೇಶನ್‍ನ 40 ಮಂದಿ ಮುಸ್ಲಿಂ ಭಾಂದವರು ಕಳೆದ ಏಳು ವರ್ಷಗಳಿಂದ ಇಂತಹಾ ಧರ್ಮ ಕಾರ್ಯ ಮಾಡ್ತಿರೋದು ಸಮಾಜಕ್ಕೆ ಸಾಕಷ್ಟು ಅನುಕೂಲಗಳಾಗ್ತಿವೆ. ಹಿಂದುಗಳ ಹಬ್ಬವಾಗಲಿ, ಮುಸ್ಲಿಮರ ಹಬ್ಬವಾಗಲಿ ಯಾವುದೇ ಹಬ್ಬ ಬಂದ್ರು ಇವ್ರು ಎಲ್ಲಾ ಬಡವರಿಗೆ ಸಾಕಷ್ಟು ಅನುಕೂಲ ಮಾಡ್ತಿದ್ದಾರೆ. ಕಳೆದ 2 ವರ್ಷಗಳ ಹಿಂದೆ ತಮ್ಮ ಸಂಘವನ್ನ ನೊಂದಣಿ ಮಾಡಿಸಿಕೊಂಡಿರೋ ಇವ್ರಿಗೆ ಸಂಘಕ್ಕಿಂತ ಸೇವೆ ಮುಖ್ಯವಾಗಿದೆ.

ಈ ಸಂಘಟನೆಯಲ್ಲಿರೋರೆಲ್ಲಾ ಮುಸ್ಲಿಂ ಬಾಂಧವರು. ಮೂಡಿಗೆರೆಯಲ್ಲಿ ಹುಟ್ಟಿ ಬೆಳೆದ ಇವರೆಲ್ಲಾ ಹೊರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳು ತಮ್ಮ ದುಡಿಮೆಯ ಒಂದು ಭಾಗವನ್ನ ಸೇವೆಗೆಂದು ತೆಗೆದಿಟ್ಟು ಮೂಡಿಗೆರೆಯ ಬಡಜನರಿಗೆ ಅನುಕೂಲ ಮಾಡ್ತಿದ್ದಾರೆ. ಈ ಸಂಘಟನೆಯಿಂದ ಸಹಾಯ ಪಡೆದು ಹೊಸ ಬದುಕು ಕಟ್ಟಿಕೊಂಡಿರೋರು ಸಾಕಷ್ಟು ಜನರಿದ್ದಾರೆ. ಇವ್ರು ಕ್ಯಾನ್ಸ್‍ರ್ ರೋಗಿಗಳು ಸಾಕಷ್ಟು ನೆರೆವು ನೀಡ್ತಿದ್ದಾರೆ. ಕೆಲವರಿಗೆ ಹುಷಾರಿಗಿದೆ. ಕೆಲ ಕಡುಬಡವರ ಆಸ್ಪತ್ರೆ ವೆಚ್ಚವನ್ನೂ ಇವರೇ ಭರಿಸುತ್ತಿರೋದು ಮತ್ತೊಂದು ವಿಶೇಷ. ಇಲ್ಲಿಯವರೆಗೆ 52 ಲಕ್ಷಕ್ಕೂ ಅಧಿಕ ಹಣವನ್ನ ಸಹಾಯ ಮಾಡಿದ್ದಾರೆ.

ನಾಳೆ ಬೆಳಗ್ಗೆ 10.30ಕ್ಕೆ ನಗರದ ಅಂಡ್ಯಾತಾಯ ರಂಗಮಂದಿರದಲ್ಲಿ ಎಸ್ಪಿ ಅಣ್ಣಾಮಲೈ ಇದನ್ನ ಉದ್ಘಾಟಿಸಲಿದ್ದಾರೆ. ಈ ಸುಮಧುರ ಘಳಿಗೆಯಲ್ಲಿ ಶಾಸಕ ಬಿ.ಬಿ.ನಿಂಗಯ್ಯ, ವಿಧಾನಪರಿಷತ್ ಸದಸ್ಯೆ ಮೋಟಮ್ಮ, ಪ್ರಾಣೇಶ್ ಸೇರಿದಂತೆ ನಗರದ ಇತರೇ ಪ್ರಮುಖರ ಹಾಜರಿರಲಿದ್ದಾರೆ.