ಭೀಕರ ರಸ್ತೆ ಅಪಫಾತ : ಐವರು ಸ್ಥಳದಲ್ಲೇ ಸಾವು, 11 ಮಂದಿಗೆ ಗಂಭೀಯ ಗಾಯ

443

ಕೋಲಾರ : ಭೀಕರ ರಸ್ತೆ ಅಫಘಾತ ಸಂಭವಿಸಿದ್ದು, ಸಾರಿಗೆ ಬಸ್ ಹಾಗೂ ಟೆಂಪೋ ಟ್ರಾವಲರ್ ನಡುವೆ ಮುಖಾಮುಖಿ ಡಿಕ್ಕಿ‌ಯಾಗಿ ಮೂರು ಜನ ಮಹಿಳೆಯರು ಸೇರಿದಂತೆ ಐದು ಜನ ಸಾವು, ೧೧ ಜನರಿಗೆ ಗಾಯವಾಗಿದೆ. ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರು ಪಾಳ್ಯಂನ ಕೆಜಿ ಸತ್ರಂ ಬಳಿ ಘಟನೆ ಸಂಭವಿಸಿದ್ದು, ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದ ಸಾರಿಗೆ ಬಸ್ ಗೆ ತಿರುಪತಿಯಿಂದ ಬರುತ್ತಿದ್ದ ಟೆಂಪೋ ಟ್ರಾವಲರ್ ಡಿಕ್ಕಿಯಾಗಿದೆ. ಟೆಂಪೋ ಟ್ರಾವಲರ್ ನಲ್ಲಿದ್ದ ಮಹಾರಾಷ್ಟ್ರ ಮೂಲದ ಐದು ಜನ ಸಾವಿಗೀಡಾಗಿದ್ದು, ಛತ್ತೀಸ್ ಗಢ್ ನಿಂದ ತಿರುಪತಿ ದರ್ಶನ ಪಡೆದು ಮೈಸೂರು ಪ್ರವಾಸ ಕೈಗೊಂಡಿದ್ದ ೧೮ ಜನ ಮಹಾರಾಷ್ಟ್ರ ಮೂಲದವರೆಂದು ತಿಳಿದುಬಂದಿದೆ. ಸಾರಿಗೆ ಬಸ್ ನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಯದಿಂದ ಪಾರಾಗಿದ್ದು, ಸ್ಥಳಕ್ಕೆ ಚಿತ್ತೂರು ಡಿವೈಎಸ್ ಪಿ ಚೌಡೇಶ್ವರಿ ಸೇರಿದಂತೆ  ಆಂದ್ರಪ್ರದೇಶದ ಬಂಗಾರುಪಾಳ್ಯಂ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದಾರೆ.