ಕಳಸ – ನಿಮ್ಮ ನಿಮ್ಮ ಮನೆಗಳಲ್ಲಿ ಗಿಡಗಳನ್ನು ನೆಡುವುದರ ಮುಖಾಂತರ ಹುಟ್ಟುಹಬ್ಬವನ್ನು ಆಚರಿಸಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕರಾದ ನಾಗರಾಜ್ ಹೇಳಿದರು.ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳ್ಳುವಳ್ಳಿಯ ಆವರಣದಲ್ಲಿ ಯೋಜನೆಯ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಕ್ಕಳು ಪರಿಸರದ ಬಗೆಗೆಗಿನ ಕಾಲಾಜಿ ಮತ್ತು ಪರಿಸರದ ಮಹತ್ವದ ಬಗ್ಗೆ ಹೆಚ್ಚು ಒಲವನ್ನು ತೋರಿಸಬೇಕು. ಪ್ರತಿ ಹುಟ್ಟುಹಬ್ಬದಂದು ಒಂದು ಗಿಡಗಳನ್ನು ನೆಡಿ,ಗಿಡಗಳನ್ನು ವಿತರಣೆ ಮಾಡಿ ಇದರಿಂದ ನಿಮ್ಮ ಹುಟ್ಟು ಹಬ್ಬವನ್ನು ಆಚರಿಸಿರುವುದು ಸಾರ್ಥಕವಾದಂತಾಗುತ್ತದೆ.ನಮ್ಮ ಸುತ್ತಮುತ್ತ ಎಷ್ಟು ಮರಗಿಡಗಳು ಇರುತ್ತವೆಯೋ ಅಷ್ಟು ನಾವು ಆರೋಗ್ಯದಿಂದ ಇರಲು ಸಾದ್ಯವಾಗುತ್ತದೆ.ಮುಂದಿನ ಪೀಳಿಗೆ ಶುದ್ಧವಾದ ಗಾಳಿ ಸೇವಿಸಿ ಆರೋಗ್ಯವಂತಾರಾಗಿರಬೇಕಾದರೆ ನಮ್ಮ ಪರಿಸರವನ್ನು ಬೆಳೆಸುವುದಲ್ಲದೆ ರಕ್ಷಣೆಯನ್ನು ಕೂಡ ಮಾಡಬೇಕಾಗುತ್ತದೆ ಎಂದು ಹೇಳಿದರು.
ಉಪವಲಯ ಅರಣ್ಯಾಧಿಕಾರಿ ಡಿ.ಎಸ್.ಚೇತನ್ ಮಾತನಾಡಿ ಅರಣ್ಯ ನಾಶ ತಡೆದು ಅರಣ್ಯ ರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದೆ. ಅರಣ್ಯ ನಾಶದಿಂದ ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತದೆ.ಉತ್ತಮ ಪರಿಸರವಿದ್ದಲ್ಲಿ ಉತ್ತಮ ವಾತಾವರಣ ಇರಲಿದ್ದು, ವಿದ್ಯಾರ್ಥಿಗಳು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ನಾಯ್ಕ್,ಶಾಲಾ ಮುಖ್ಯ ಶಿಕ್ಷಕ ವಸಂತ್ ಪೈ,ಅರಣ್ಯ ರಕ್ಷಕ ಶಂಕರ್,ಸಿರಿದಾನ್ಯ ವಿಸ್ತರಣಾಧಿಕಾರಿ ರಾಮಕುಮಾರ್,ಸೇವಾ ಪ್ರತಿನಿಧಿ ಪ್ರಶಾಂತ್ ಇತರರಿದ್ದರು.