ಚಿಕ್ಕಮಗಳೂರು- ಸಿ.ಎಂ ನಾಟಿ ಮಾಡುವುದರ ವಿಚಾರಕ್ಕೆ ಈಶ್ವರಪ್ಪ ವ್ಯಂಗ್ಯವಾಡಿದ್ದು, ಇದಕ್ಕೆ ಪ್ರತಿಕ್ರಯಿಸಿದ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಧರ್ಮೆಗೌಡ ಅವರು ಮಾತನಾಡಿ ಸಿ.ಎಂ ಕುಮಾರಸ್ವಾಮಿ ರೈತರ ಮಗ, ರೈತರ ಮಗ ನಾಟಿ ಮಾಡದೇ ಕ್ಲಬ್ ನಲ್ಲಿ ಡ್ಯಾನ್ಸ್ ಮಾಡಕ್ಕೆ ಆಗುತ್ತಾ ಇಲ್ಲ ಬಿಜೆಪಿ ಅವರಂತೆ ಸದನದಲ್ಲಿ ಕೂತು ಬ್ಲೂ ಫಿಲ್ಮ್ ನೋಡಕ್ಕೆ ಆಗುತ್ತಾ, ಬಿಜೆಪಿ ಅವರಿಗೆ ಮೊಸರಿನಲ್ಲಿ ಕಲ್ಲು ಹುಡುಕೋ ಕೆಲಸ ಮಾಡದಿದ್ದರೇ ಅವರಿಗೆ ಸಮಾಧಾನ ಆಗಲ್ಲ. ನಾವು ಎಷ್ಟೆ ಒಳ್ಳೆ ಕೆಲ್ಸ ಮಾಡಿದ್ರು ಬಿಜೆಪಿ ಅವರಿಗೆ ಚಂದ ಕಾಣುವುದಿಲ್ಲ.ನಾವು ಏನೆ ಮಾಡಿದ್ರು ಅವರು ಮಾತನಾಡಬೇಕು ಮಾತನಾಡ್ತಾರೆ. ಸತ್ಯ ಏನೆಂಬುದು ಜನರಿಗೆ ಗೊತ್ತು ಎಂದು ತೀರುಗೇಟು ನೀಡಿದ್ದಾರೆ.