ಹೈದರಾಬಾದ್ ನ ನಿಜಾಮ್ ಮ್ಯೂಸಿಯನಿಂದ ಚಿನ್ನ, ವಜ್ರ ದರೋಡೆ…

253
firstsuddi

ಹೈದರಾಬಾದ್ :ನಿಜಾಮ ಕಾಲದ ಅತ್ಯಂತ ಬೆಲೆಬಾಳುವ, ವಜ್ರಗಳು, 2 ಕೆ.ಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್, ಕಪ್, ತಟ್ಟೆ, ಮತ್ತು ಚಮಚ, ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಹೈದರಾಬಾದ್ ನ ಪುರಾನಿ ಹವೇಲಿಯಲ್ಲಿರುವ ನಿಜಾಮ್ ಮ್ಯೂಸಿಯಂನಲ್ಲಿ ಬಿಗಿ ಭದ್ರತೆಯಿದ್ದರೂ ದರೋಡಕೋರರು ಕೈಚಳಕ ತೋರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.